ಶೀಘ್ರದಲ್ಲೇ ಸಮಗ್ರ ಕನ್ನಡ ಕವಿಗಳ ವೆಬ್ ಸೈಟ್

ಸಂಸ್ಥೆಯ ಅಧ್ಯಕ್ಷ ಆರ್ ಶಿವಕುಮಾರಸ್ವಾಮಿ ಕುರ್ಕಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಂತರ್ಜಾಲ ತಾಣದಲ್ಲಿ ಕವಿಗಳು ಹಾಗೂ ಅವರ ಕವನ ಸಂಕಲನಗಳು, ಬರಹಗಳು, ವಿಡಿಯೋ ಸಂಭಾಷಣೆ ಮತ್ತು ಸಂಪರ್ಕದ ವಿವರಗಳನ್ನು ನೀಡಲಾಗುತ್ತದೆ ಎಂದರು. ಹಳಗನ್ನಡದಿಂದ ಹೊಸಗನ್ನಡದ ತನಕ ಈ ಅಂತರ್ಜಾಲ ತಾಣದಲ್ಲಿ ಮಾಹಿತಿ ಲಭ್ಯವಾಗಲಿದೆ.
ಜಗತ್ತಿನಾದ್ಯಂತ ಚದುರಿ ಹೋಗಿರುವ ಕನ್ನಡಿಗರಿಗೆ ಈ ಅಂತರ್ಜಾಲ ತಾಣದಿಂದ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಕುರ್ಕಿ ವ್ಯಕ್ತಪಡಿಸಿದರು. ಕವಿಗಳಿಗೆ ಸಂಬಂಧಿಸಿದ ಮಹತ್ವಪೂರ್ಣ ಮಾಹಿತಿಯನ್ನು ಸಾರ್ವಜನಿಕರು ಸಂಸ್ಥೆಗೆ ಕೊಡಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 94489 24305.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications