ಜಿಯೋಸಿಟಿಗೆ ಗುಡ್ ಬೈ ಎಂದ ಯಾಹೂ
ಬೆಂಗಳೂರು,
ಅ. 27 : ಒಂದು ಅಧ್ಯಾಯದ ಸಮಾಪ್ತಿ. ಅಂತರ್ ಜಾಲದ ಮೊದಲ ತಾಣ ಜಿಯೋಸಿಟೀಸ್ ಗೆ ಶುಭವಿದಾಯ. ಇಂಟರ್ ನೆಟ್ ಒಲವಿನ ಒಂದು ಜನಾಂಗಕ್ಕೆ ಕಣ್ಣು ತೆರೆಸಿದ ಯಾಹೂ, ತನ್ನ ಒಡೆತನದ ಜಿಯೋಗೆ ನಾಳೆ ಚರಮಗೀತೆ ಹಾಡಲು ಸಜ್ಜಾಗಿದೆ. ಹೌದು, ಜಿಯೋ ನಾಳೆ ( 28 ಅ.2009) ಕಣ್ಣು ಮುಚ್ಚುತ್ತದೆ. id="toptextpromo">ಜಿಯೋ
ಪುಟಗಳನ್ನು ದಫನ್ ಮಾಡಲಾಗುತ್ತದೆ ಎಂದು ಯಾಹೂ ತನ್ನ ಬಳಕೆದಾರರಿಗೆ ಈ ಮುಂಚೆ ಅನೇಕಬಾರಿ ಮುನ್ಸೂಚನೆ ಕೊಟ್ಟಿದೆ. ಬಳಕೆದಾರರು ಈ ಕೂಡಲೇ ತಾವು ವೆಬ್ ನಲ್ಲಿ ಹೂತಿಟ್ಟಿದ್ದ ಮಾಹಿತಿಯನ್ನು ಜಿಯೋ ಪುಟಗಳಿಂದ ಎತ್ತಿಕೊಂಡು ಕಾಪಿಟ್ಟುಕೊಳ್ಳುವುದು ಕ್ಷೇಮಕರ.ಹಾಗಿದ್ದರೂ, ವೆಬ್ ಆರ್ ಕೈವ್ಸ್ ನಲ್ಲಿ ಆಯ್ದ ಕೆಲವು ಪುಟಗಳನ್ನು 'ಇತಿಹಾಸದ ದಾಖಲೆ ' ಪುಟಗಳಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾಹೂ ತಂಡ ಕೆಲಸ ಮಾಡುತ್ತಿದೆ. ಗುಡ್ ಬೈ. id='are-slot-1' class='oiad oi-axt oiadv'> id='top-searched-articles'>
(ಏಜೆನ್ಸೀಸ್)












Click it and Unblock the Notifications