ಮಾಗಡಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

Woman murdered in Ramnagar district
ರಾಮನಗರ, ಅ. 25 : ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಪೋಲೀಸ್ ಠಾಣಾ ವ್ಯಾಪ್ತಿಯ ತಾಳೆಕೆರೆ ಹ್ಯಾಂಡ್‌ಪೋಸ್ಟ್‌ ಬಳಿಯ ಚಿಕ್ಕಕಲ್ಯಾ ಕ್ರಾಸ್ ಬಳಿ ಅಪರಿಚಿತ ವಿವಾಹಿತ ಮಹಿಳೆಯ ಶವಪತ್ತೆಯಾಗಿದೆ.

ಸುಮಾರು 5.2 ಅಡಿ ಎತ್ತರವಿರುವ ಮಹಿಳೆಯ ಬಲಗೈ ಮೇಲೆ ಹಿಂದಿಯಲ್ಲಿ ಓಂಕಾರದ ಹಚ್ಚೆ ಗುರುತಿದೆ. ಮಹಿಳೆಯ ಕೈ ಮತ್ತು ಕಾಲು ಮೇಲೆ ಹಾಕಿರುವ ಮೆಹಂದಿಯ ಗುರುತು ಕೂಡ ಇದೆ. ಕೆಂಪು ಮೈಬಣ್ಣವಿರುವ ಮಹಿಳೆಯನ್ನ ಕತ್ತುಹಿಸುಕಿ ಕೊಲೆಗೈದಿರಬಹುದೆಂದು ಶಂಕಿಸಲಾಗಿದೆ. ಸದ್ಯಕ್ಕೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ ಶವಾಗಾರದಲ್ಲಿ ಶವವನ್ನಿರಿಸಲಾಗಿದೆ ಎಂದು ಪಿ.ಎಸ್.ಐ ಶಬರೀಶ್ ತಿಳಿಸಿದ್ದಾರೆ.

ಈ ಅಪರಿಚಿತ ಮಹಿಳೆಯ ಶವ ಪತ್ತೆಯಾಗುವ ಮುನ್ನಾದಿನವಷ್ಟೆ ವಿಕೃತ ಮೋಹನನ ಮುರುಳಿಗಾನಕ್ಕೆ ಮಸಣದ ಹಾದಿ ಹಿಡಿದ 18 ಯುವತಿಯರ ಪ್ರಕರಣ ಬಯಲಾಗಿದೆ. ವಿಕೃತ ಮೋಹನನ "ಸೈನೈಡ್ ಲವ್" ಪ್ರಕರಣದಿಂದ ಎಚ್ಚೆತ್ತಿರುವ ಪೋಲೀಸ್ ಇಲಾಖೆ ಯಾವುದೇ ಮಹಿಳೆ ಮತ್ತು ಪುರುಷರ ಅಪರಿಚಿತ ಶವಗಳು ಪತ್ತೆಯಾದರೂ ತಕ್ಷಣವೇ ಪ್ರಕರಣದ ಬೆನ್ನುಹತ್ತುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ಅಪರಿಚಿತ ಶವಗಳ ವಾರಸುದಾರರನ್ನ ಪತ್ತೆ ಹಚ್ಚುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನ ಕೈಗೊಂಡರೂ ಕೂಡ ಮಾಧ್ಯಮಗಳ ಸಹಾಯ ಅವಶ್ಯಕವಾಗಿರುತ್ತದೆ. ಪತ್ರಿಕೆಗಳಲ್ಲಿ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅಪರಿಚಿತ ಶವಗಳ ಚಹರೆ ಬಗ್ಗೆ ವರದಿ ಮಾಡಿದರೆ ವಾರಸುದಾರರು ಪತ್ತೆಯಾಗಲು ಸುಲಭವಾಗುತ್ತದೆ. ಆದ್ದರಿಂದ ಮಾಧ್ಯಮಗಳು ಈ ರೀತಿಯ ಪ್ರಕರಣಗಳನ್ನ ಪತ್ತೆಹಚ್ಚುವಲ್ಲಿ ಪೋಲೀಸರೊಂದಿಗೆ ಹೆಚ್ಚಿನ ಸಹಕಾರ ನೀಡಬೇಕೆಂದು ಪೋಲೀಸರು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+