• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಸುತ್ತ ಕೋಟೆ ಕಟ್ಟುತ್ತಿರುವ ದುಷ್ಟಕೂಟ

|
(ಮುಂದುವರಿದಿದೆ...)

ಮತ್ತೆ ಯುದ್ಧವೇ?

1962ರಂತೆಯೇ ಮತ್ತೊಂದು ಯುದ್ಧಕ್ಕೆ ಚೀನಾ ತನ್ನನ್ನಿಂದು ಅಣಿಮಾಡಿಕೊಳ್ಳುತ್ತಿದೆ. ಅದಕ್ಕೆ ಮುನ್ನುಡಿಯಾಗಿ ಭಾರತದ ಸನ್ನದ್ಧತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳುತ್ತಿದೆ. ಇಡೀ ಮಣಿಪುರ ಪ್ರಾಂತ್ಯವೇ ತನ್ನದೆಂದು ಹೇಳಿಕೊಳ್ಳುತ್ತಿರುವ ಧೂರ್ತ ಚೀನಾ ಮುಖ್ಯವಾಗಿ ತವಾಂಗ್ ಬೌದ್ಧಕ್ಷೇತ್ರದಮೇಲೆ ತನ್ನ ಕಣ್ಣಿರಿಸಿದೆ.

ನಾವಿಂದು 62ರ ಸ್ಥಿತಿಗಿಂತ ಹೆಚ್ಚು ಶಕ್ತರಾಗಿರಬಹುದು. ಆದರೆ ಚೀನಾ ನಮಗಿಂತ ಹೆಚ್ಚು ಶಕ್ತವಾಗಿದೆಯೆನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮಗಿಂತ ಹೆಚ್ಚು ಸೈನ್ಯಬಲ ಮತ್ತು ಶಸ್ತ್ರಾಸ್ತ್ರಗಳನ್ನು ಚೀನಾ ಹೊಂದಿದೆ. ಮೇಲಾಗಿ, ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳ ಪರೋಕ್ಷ ಬೆಂಬಲ ಚೀನಾದ ಬೆನ್ನಿಗಿದೆ.

ಇದರ ಜೊತೆಗೆ, ಚೀನಾದೊಡನೆ ಬೃಹತ್ ವ್ಯವಹಾರ ಸಂಬಂಧ ಇಟ್ಟುಕೊಂಡಿರುವ ಅಮೆರಿಕವು ಇಂದು ತನಗೆ ಅಭಿವೃದ್ಧಿ ರಂಗದಲ್ಲಿ ಪ್ರತಿಸ್ಪರ್ಧಿಯಾಗಿರುವ ಭಾರತದ ಕುಸಿತವನ್ನು ಹಾರೈಸುತ್ತಿದೆ. ಆದ್ದರಿಂದ ಚೀನಾದ ಈ ಅತಿಕ್ರಮಣವನ್ನು ಭಾರತವು ಲಘುವಾಗಿ ಪರಿಗಣಿಸಬಾರದು. ಯುದ್ಧಕ್ಕೆ ನಾವು ಪೂರ್ಣ ಸನ್ನದ್ಧರಾಗಿರಬೇಕು. ಅದೇವೇಳೆ, ವಿಶ್ವಮಟ್ಟದಲ್ಲಿ ವಿವಿಧ ದೇಶಗಳ ಒಲವು ಗಳಿಸುವ ಸಲುವಾಗಿ ಅವಶ್ಯಕ ಲಾಬಿ ಕಾರ್ಯವನ್ನೂ ನಾವು ಕೈಕೊಳ್ಳಬೇಕು. ಯುದ್ಧ ಸಂಭವಿಸದಂತೆ ನೋಡಿಕೊಳ್ಳಲು ಕೂಡ ಇಂಥ ಲಾಬಿ ಅವಶ್ಯ.

ಭಾರತದ ಸುತ್ತ ದುಷ್ಟಕೂಟ

ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳು ತಮ್ಮದೇ ಆದ ಕಾರಣಗಳಿಂದಾಗಿ ಮತ್ತು ಅನುಮಾನ-ಭ್ರಮೆಯಿಂದಾಗಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿವೆ. ಪಾಕಿಸ್ತಾನವಂತೂ ಭಾರತವನ್ನು ಶತ್ರುವಾಗಿ ಪರಿಗಣಿಸಿ ಭಾರತದ ಅಧಃಪತನಕ್ಕಾಗಿ ತನ್ನ ಹುಟ್ಟಿನಿಂದಲೂ ಏನೆಲ್ಲ ಪ್ರಯತ್ನಗಳನ್ನು ನಡೆಸಿಕೊಂಡೇ ಬಂದಿದೆ. ಉಗ್ರರನ್ನು ಮತ್ತು ಖೋಟಾ ನೋಟುಗಳನ್ನು ಭಾರತದೊಳಕ್ಕೆ ಕಳಿಸಲು ಅದು ನೇಪಾಳವನ್ನು ಬಳಸಿಕೊಳ್ಳುತ್ತಿರುವುದು, ನೇಪಾಳದ ಮಾಜಿ ಮಂತ್ರಿಯೊಬ್ಬನ ಪುತ್ರನೇ ಈ ಜಾಲದ ಮುಖ್ಯಸ್ಥನಾಗಿರುವುದು ಮತ್ತು ನೇಪಾಳದ "ದೊರೆಮಗ"ನ ನೆರವು ಈ ಜಾಲಕ್ಕೆ ಇರುವುದು ಈಗ ಗುಟ್ಟಿನ ಸಂಗತಿಯಾಗಿಯೇನೂ ಉಳಿದಿಲ್ಲ.

ನೇಪಾಳಕ್ಕೆ ಭಾರತವೆಂದರೆ ಭಯ ಮತ್ತು ಈರ್ಷ್ಯೆ. ಅಲ್ಲಿ ಮಾವೋವಾದಿಗಳ ಕೈ ಮೇಲಾದ ಬಳಿಕವಂತೂ ಭಾರತದ ವಿರುದ್ಧ ಒಂದು ರೀತಿಯ ಹಗೆತನ. ಪಶುಪತಿನಾಥ ದೇವಾಲಯದ ಭಾರತೀಯ ಅರ್ಚಕರಮೇಲೆ ನಡೆದ ದಾಳಿ ಈ ಹಗೆತನದ ಒಂದು ಸೂಚನೆ. ಇನ್ನು, ಮಾವೋವಾದಿಗಳೆಂದಮೇಲೆ ಚೀನಾ ಬಗ್ಗೆ ಒಲವಿರುವುದಂತೂ ಸರ್ವವೇದ್ಯ.

ಭಾರತದ ಬಗ್ಗೆ ಭಯ, ಈರ್ಷ್ಯೆ ಮತ್ತು ಹಗೆತನದ ವಿಷಯದಲ್ಲಿ ಬಾಂಗ್ಲಾದೇಶವೇನೂ ಭಿನ್ನವಲ್ಲ. ಭಾರತದೊಳಕ್ಕೆ ಮುಸ್ಲಿಂ ಉಗ್ರರ ನುಸುಳುವಿಕೆಗೆ ಬಾಂಗ್ಲಾದೇಶದ ನೆರವು ಮತ್ತು ಭಾರತಕ್ಕೆ ಬಾಂಗ್ಲಾದೇಶೀಯರ ಅಕ್ರಮ ವಲಸೆ ಇವಂತೂ ಸರ್ವವಿದಿತ. ಈ ರೀತಿ, ಅಕ್ಕಪಕ್ಕದಲ್ಲಿ ಕಂಟಕಪ್ರಾಯರನ್ನಿಟ್ಟುಕೊಂಡಿರುವ ನಾವು ಚೀನಾದ ಅತಿಕ್ರಮಣದ ಗಾತ್ರವನ್ನು ಮತ್ತು ಪರಿಣಾಮವನ್ನು ಅಂದಾಜುಮಾಡುವಾಗ ಈ ಕಂಟಕಪ್ರಾಯರ ದುಷ್ಟತನವನ್ನೂ ಸೇರಿಸಿ ಅಳೆಯಬೇಕಾಗುತ್ತದೆ. ಜೊತೆಗೆ, ಅಮೆರಿಕದ ಕುಟಿಲತನವನ್ನೂ ಈ ಸಂದರ್ಭದಲ್ಲಿ ಮುಂದಾಲೋಚಿಸಬೇಕಾಗುತ್ತದೆ.

ಏಷ್ಯಾದ ಮತ್ತು ಕ್ರಮೇಣ ಇಡೀ ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾವು ತನಗೆ ಪ್ರತಿಸ್ಪರ್ಧಿಯಾಗಿರುವ ಭಾರತವನ್ನು ಬಗ್ಗುಬಡಿಯಲು ಹಾತೊರೆಯುತ್ತಿದೆ. ಅಮೆರಿಕವು ಭಾರತ-ಚೀನಾ ಯುದ್ಧಕ್ಕೆ ಒಳಗಿಂದೊಳಗೇ ಪ್ರೋತ್ಸಾಹ ಕೊಡುವ ಮೂಲಕ ಎರಡೂ ದೇಶಗಳನ್ನೂ ಅವನತಿಯ ಅಂಚಿಗೆ ತಳ್ಳಲು ಸ್ಕೆಚ್ ಹಾಕತೊಡಗಿದೆ. ಅಭಿವೃದ್ಧಿರಂಗದಲ್ಲಿ ತನಗೆ ತೀವ್ರ ಪೈಪೋಟಿ ನೀಡುತ್ತಿರುವ ಎರಡೂ ದೇಶಗಳನ್ನೂ ಒಂದೇ ಕಲ್ಲಿನಲ್ಲಿ ಹೊಡೆದುಹಾಕಲು ಅಮೆರಿಕಕ್ಕೆ ಇದು ಉತ್ತಮ ಅವಕಾಶ ತಾನೆ? ಈ ಅಪಾಯದ ಗಂಟೆ ಭಾರತದ ಮಿದುಳಿನಲ್ಲಿ ಸದಾ ಬಾರಿಸುತ್ತಿರಬೇಕು. ಭಾರತವು ಸದಾ ಜಾಗೃತವಾಗಿರಬೇಕು.

ಭಾಗ : « 1 2 3 »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more