ಮೇವಾರ್, ಗೋವಾ ಎಕ್ಸ್ ಪ್ರೆಸ್ ಡಿಕ್ಕಿ: 9 ಸಾವು

ಘಟನೆಯಲ್ಲಿ 50 ಕ್ಕೂ ಹೆಚ್ಚು ಮಂದಿ ಜಖಂಗೊಂಡ ರೈಲ್ವೆ ಬೋಗಿಯಲ್ಲೇ ಉಳಿದುಕೊಂಡಿದ್ದಾರೆ. ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಮಥುರಾ ಬಳಿ ನಿಂತಿದ್ದ ಮೇವಾರ್ ಎಕ್ಸ್ ಪ್ರೆಸ್ ರೈಲನ್ನು ಗೋವಾ ಸಂಪರ್ಕ್ ಕ್ರಾಂತಿ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಅಪಘಾತ ಸುದ್ದಿ ತಿಳಿದ ಕೂಡಲೆ ರೈಲ್ವೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿ ಸಹಾಯ ಕೆಲಸಗಳಲಿ ಮಗ್ನರಾಗಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ ಕಟರ್ ಬಳಸಿ ಕಿಟಕಿಗಳನ್ನು ಕತ್ತರಿಸಿ ಬೋಗಿಯಲ್ಲಿ ಸಿಕ್ಕಿಕೊಂಡಿರುವ ಪ್ರಯಾಣಿಕರನ್ನು ಹೊರ ತರಲಾಗುತ್ತಿದೆ. ಅಪಘಾತದ ವಿವರಗಳನ್ನು ತಿಳಿದುಕೊಳ್ಳಲು ರೈಲ್ವೆ ಸಹಾಯವಾಣಿಯನ್ನು ಏರ್ಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications