ಚಂದ್ರಯಾನ1 ನಾಸಾ ವಿಜ್ಞಾನಿ ಬಂಧನ
ವಾಷಿಂಗ್
ಟನ್, ಅ. 21 : ಭಾರತದ ಚಂದ್ರಯಾನ-1 ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಅಮೆರಿಕದ ನಾಸಾ ವಿಜ್ಞಾನಿ ಸ್ವೆವರ್ಟ್ ಡೆವಿಡ್ ನೊಜೆಟ್ (52) ಅವರನ್ನು ಅಮೆರಿಕದ ರಹಸ್ಯ ರಕ್ಷಣಾ ಮಾಹಿತಿಗಳನ್ನು ಇಸ್ರೇಲ್ ಗೆ ರವಾನಿಸಲು ಯತ್ನಿಸಿದ ಆರೋಪದ ಮೇಲೆ ಸೋಮವಾರ ಬಂಧಿಸಲಾಗಿದೆ. id="toptextpromo">ಚಂದ್ರನಲ್ಲಿ
ನೀರಿನ ಅಂಶ ಇರುವ ಬಗ್ಗೆ ಚಂದ್ರಯಾನ1 ನಡೆಸಿದ ಶೋಧನೆಯಲ್ಲಿ ನೊಜೆಟ್ ಅವರ ಪಾತ್ರ ಬಹುಮುಖ್ಯವಾದದ್ದು ಎಂದು ಪರಿಗಣಿಸಲಾಗಿದೆ. ಚಂದ್ರನ ಮೇಲೆ ನೀರಿನ ಅಂಶವನ್ನು ಗುರುತಿಸಲು ಬಳಸಲಾದ ಮನಿ ಸಾರ್ (ಸಿಂಥೆಟಿಕ್ ಅಪಾರ್ಚರ್ ರಾಡಾರ್) ಅಭಿವೃದ್ಧಿಪಡಿಸುವಲ್ಲಿ ನೊಜೆಟ್ ಕೊಡುಗೆ ಗಣನೀಯ. ತಾನು ಇಸ್ರೇಲಿ ಗುಪ್ತಚರ ಏಜೆಂಟ್ ಎಂದು ಹೇಳಿ ಎಫ್ ಬಿಐ ಏಜೆಂಟ್ ಗೆ ಅಮೆರಿಕದ ಕೆಲವು ರಕ್ಷಣಾ ಗೋಪ್ಯಗಳನ್ನು ಮಾರಾಟ ಮಾಡಲು ನೊಜೆಟ್ ಯತ್ನಿಸಿ ಇದೀಗ ಸಿಕ್ಕಿಬಿದ್ದಿದ್ದಾರೆ. ನೊಜೆಟ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications