ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯೂಸಿ ವಿದ್ಯಾರ್ಥಿಗಳಿಗೆ ಸವಾಲ್

|
Google Oneindia Kannada News

ಬೆಂಗಳೂರು, ಅ. 20 : ಪಿಯೂಸಿ ವ್ಯಾಸಂಗ ಮಾಡುತ್ತಿರುವ ಅಥವಾ ಮಾಡಬಯಸುವ ವಿದ್ಯಾರ್ಥಿಗಳು ಕ್ಲಾಸುಗಳಿಗೆ ಚಕ್ಕರ್ ಹಾಕದಂತೆ ಮತ್ತು ತಮ್ಮ ವ್ಯಾಸಂಗ ದೀಕ್ಷೆಯನ್ನು ಗಂಭೀರವಾಗಿ ಪರಿಣಿಸುವಂತಾಗಲು ಕೇಂದ್ರ ಸರಕಾರ ಕೆಲವು ಕ್ರಮಗಳತ್ತ ಕೈಚಾಚಿದೆ. ಅದರಲ್ಲಿ ಮುಖ್ಯವಾದದ್ದು, ಐಐಟಿ ಅಥವಾ ಜೆಇಇ ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ದ್ವಿತೀಯ ಪಿಯೂಸಿಯಲ್ಲಿ ಕನಿಷ್ಠ ಶೇ.80 ಅಂಕಗಳನ್ನು ತೆಗೆಯಬೇಕು.

ಐಐಟಿ ಜೆಇಇ ಸೇರಬಯಸುವ ವಿದ್ಯಾರ್ಥಿಗಳು ಪಿಯೂಸಿಯಲ್ಲಿ ಗಳಿಸಿರುವ ಅಂಕಗಳನ್ನೂ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು. ಪ್ರವೇಶ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಜತೆಗೆ ಪಿಯೂಸಿಯಲ್ಲಿ ಗಳಿಸಿರುವ ಅಂಕಗಳನ್ನೂ ಸೇರಿಸಿ ಉನ್ನತ ವ್ಯಾಸಂಗಕ್ಕೆ ಪ್ರವೇಶಗಳನ್ನು ನಿರ್ಧರಿಸಬೇಕು ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಾಲ್ ಬಯಸಿದ್ದಾರೆ. ಇದಕ್ಕಾಗಿ ಸರಕಾರ ಒಂದು ಸಮಿತಿಯನ್ನು ರಚಿಸಿದ್ದು ಐಐಟಿ ಪ್ರವೇಶ ಪದ್ದತಿಯನ್ನೇ ಮರು ಪರಿಶೀಲನೆಗೆ ಒಡ್ಡುವಂತೆ ಸೂಚಿಸಲಾಗಿದೆ.

ಐಐಟಿ ಪ್ರವೇಶಕ್ಕೆ ಪಿಯೂಸಿಯಲ್ಲಿ ಪಡೆದ ಅಂಕಗಳ ಗಣನೆ ಕನಿಷ್ಠ ಮಿತಿ ಈಗ ಶೇ. 60 ಇದು ಸಲ್ಲದು. ಅಲ್ಲದೆ, ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕೋಚಿಂಗ್ ಕ್ಯಾಂಪುಗಳ ಹಾವಳಿ ದೇಶದಲ್ಲಿ ಹೆಚ್ಚಾಗಿದೆ. ಇದನ್ನು ತಪ್ಪಿಸುವ ದೃಷ್ಟಿಯಿಂದಲೂ ಸೆಕೆಂಡ್ ಪಿಯೂಸಿಯಲ್ಲಿ ಗಳಿಸಬೇಕಾದ ಕನಿಷ್ಠ ಅಂಕಗಳ ಮಿತಿಯನ್ನು 80 ರಿಂದ 85 ರವರೆಗೆ ಏರಿಸಲು ಸರಕಾರ ಸನ್ನದ್ಧವಾಗಿದೆ. ಎರಡನೆ ಪಿಯೂಸಿಯಲ್ಲಿ ಕಲಿಯುತ್ತಿರುವ ಕರ್ನಾಟಕದ ವಿದ್ಯಾರ್ಥಿ ಸಮೂಹಕ್ಕೆ ಈ ಸುದ್ದಿ ಬೆಳವಣಿಗೆ ತುಂಬ ಮಹತ್ವ ಎನಿಸಿದೆ. ಕೆಫೆ ಕಾಫಿ ಡೇಗಳಲ್ಲಿ ಹರಟೆ ಹೊಡೆಯುವುದನ್ನು ಕಡಿಮೆ ಮಾಡಿ ಹೆಚ್ಚು ಓದುವತ್ತ ಗಮನ ಹರಿಸಬೇಕಂದು ದಟ್ಸ್ ಕನ್ನಡ ಹೇಳುತ್ತದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X