ಮಹಾರಾಷ್ಟ್ರ ಸೇರಿ ಮೂರು ರಾಜ್ಯಗಳಲ್ಲಿ ಮತದಾನ
ನವದೆಹಲಿ,
ಅ. 13 : ಮಹಾರಾಷ್ಟ್ರ, ಹರಿಯಾಣ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ ಇಂದು ಆರಂಭಗೊಂಡಿದೆ. ಚುನಾವಣಾ ಆಯೋಗ ಶಾಂತಿಯುತ ಮತದಾನಕ್ಕೆ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಿದೆ. ಅದರಲ್ಲೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮೂರೂ ರಾಜ್ಯಗಳಲ್ಲಿ ಮತದಾನ ಬೆಳಗ್ಗೆ 7 ಕ್ಕೆ ಆರಂಭಗೊಂಡಿದೆ. id="toptextpromo">288
ಸದಸ್ಯ ಬಲದ ಮಹಾರಾಷ್ಟ್ರ, 90 ಸದಸ್ಯ ಬಲದ ಹರಿಯಾಣಾ ಮತ್ತು 60 ಸದಸ್ಯ ಬಲದ ಅರುಣಾಚಲ ಪ್ರದೇಶಗಳಲ್ಲಿ ಮತದಾನ ನಿಧಾನಗತಿಯಲ್ಲಿ ಶುರುವಾಗಿದೆ. ಮಹಾರಾಷ್ಟ್ರದಲ್ಲಿ 7.58 ಕೋಟಿ, ಹರಿಯಾಣದಲ್ಲಿ 1.31 ಕೋಟಿ ಮತ್ತು ಅರುಣಾಚಲ ಪ್ರದೇಶದಲ್ಲಿ 7.50 ಲಕ್ಷ ಮತದಾರರಿದ್ದಾರೆ. ಮತಗಳ ಏಣಿಕೆ ಕಾರ್ಯ ಅಕ್ಟೋಬರ್ 22 ರಂದು ನಡೆಯಲಿದೆ. ಚುನಾವಣೆಗೂ ಮುನ್ನ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಕ್ಸಲರು 17 ಮಂದಿ ಪೊಲೀಸರನ್ನು ಹತ್ಯೆಗೈದಿರುವ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಸುಮಾರು 18,000 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications