ಜಿಹಾದ್:ಕ್ರಿಶ್ಚಿಯನ್ ಹಿಂದೂ ಭಾಯ್ ಭಾಯ್

VHP
ತಿರುವನಂತಪುರಂ, ಅ. 13 : ಲವ್ ಜಿಹಾದ್ ಎಂಬ ಹೆಸರಿನ ಸಾಂಸ್ಕೃತಿಕ ಭಯೋತ್ಪಾದನೆಯೊಂದು ಇತ್ತೀಚೆಗೆ ಭಾರಿ ಚಾಲ್ತಿಯಲ್ಲಿದ್ದು, ಅಮಾಯಕ ಹಿಂದೂ ಹುಡುಗಿಯರನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗಿ ಅವರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತಿರುವ ಆಘಾತಕಾರಿ ದಂಧೆ ತೀವ್ರಗೊಂಡಿದೆ. ಇದು ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ಕಡಿವಾಣಕ್ಕೆ ವಿಶ್ವ ಹಿಂದೂ ಪರಿಷತ್ ಮುಂದಾಗಿದ್ದೂ ಕೆಲ ಕ್ರಿಶ್ಚಿಯನ್ ಸಂಘಟನೆಗಳೂ ಕೈಜೋಡಿಸಿವೆ.

ಇತ್ತೀಚೆಗೆ ದೇಶದಲ್ಲಿ ಇಸ್ಲಾಂ ಧರ್ಮದ ಕೆಲ ಸಂಘಟನೆಗಳು ಈ ಕೃತ್ಯದಲ್ಲಿ ತೊಡಗಿವೆ ಎನ್ನುವ ಸುದ್ದಿ ದಟ್ಟವಾಗಿದೆ. ಇದರ ಪರಿಣಾಮವಾಗಿ ಹಿಂದೂ ಹುಡುಗಿಯರನ್ನು ಮಾತ್ರ ಪ್ರೀತಿಸಿ ಮದುವೆ ಮಾಡಿಕೊಳ್ಳುವ ಮೂಲಕ ಮತಾಂತರದಂತಹ ಹೀನ ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಕ್ರಿಶ್ಚಿಯನ್ ಧರ್ಮದ ಹುಡುಗಿಯರನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗಿ ಮತಾಂತರಕ್ಕೆ ಇಳಿದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಸಮಾಜಕ್ಕೆ ಮಾರಿಯಾಗಿರುವ ಲವ್ ಜಿಹಾದ್ ಪೀಡೆಯನ್ನು ಹೊಡೆದೊಡಿಸಲು ವಿಶ್ವ ಹಿಂದೂ ಪರಿಷತ್ ಮತ್ತು ಕೆಲ ಕ್ರಿಶ್ಚಿಯನ್ ಸಂಘಟನೆಗಳು ಹೋರಾಟ ನಡೆಸುವ ಸಿದ್ಧತೆಯಲ್ಲಿ ತೊಡಗಿವೆ.

ಕೇರಳದಾದ್ಯಂತ ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಗುರಿಯಾಗಿರಿಸಿಕೊಂಡು ಲವ್ ಜಿಹಾದ್ ತಂಡ ಕಾರ್ಯಚರಣೆ ನಡೆಸಿದೆ. ಇದರಿಂದ ಎರಡು ಧರ್ಮಗಳಿಗೆ ಭಾರಿ ಹೊಡೆತ ಬೀಳತೊಡಗಿದೆ. ಈ ಬಗ್ಗೆ ನಾವು ವಿಎಚ್ ಪಿ ಸಂಘಟನೆ ತಿಳಿಸಿರುವೆ. ಸಮಾಜಿಕ ಪಿಡುಗಾಗಿರುವ ಇಂತಹ ಕೃತ್ಯವನ್ನು ಹೋಗಲಾಡಿಸಲು ಹಿಂದೂ ಸಂಘಟನೆಯೊಂದಿಗೆ ಕೈಜೋಡಿಸಲು ನಿರ್ಧರಿಸಲಾಗಿದೆ ಎಂದು ಕೊಚ್ಚಿ ಮೂಲದ ಅಯೋಸಿಯೇಷನ್ ಫಾರ್ ಸೋಶಿಯಲ್ ಎಕ್ಷನ್ (ಕಾಸಾ) ಸಂಘಟನೆಯ ಮುಖ್ಯಸ್ಥ ಕೆ ಎಸ್ ಸ್ಯಾಮ್ಸನ್ ತಿಳಿಸಿದ್ದಾರೆ.

ಲವ್ ಜಿಹಾದ್ ಆರಂಭಗೊಂಡ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹೆಲ್ಪ್ ಲೈನ್ ಸಂಸ್ಥೆಯನ್ನು ಆರಂಭಿಸಿದ್ದಾರೆ. ಬರೀ ಮೂರು ತಿಂಗಳ ಅವಧಿಯಲ್ಲಿ ಸುಮಾರು 1,500 ಪ್ರಕರಣಗಳು ಬೆಳಕಿಗೆ ಬಂದಿವೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದರ ಹಾವಳಿ ಆರಂಭಗೊಂಡಿದೆ ಎಂದು ವರದಿಗಳು ತಿಳಿಸಿವೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+