ಇಂಗ್ಲಿಷ್ ಪತ್ರಿಕೆಗೆ ಬೇಡಿಕೆ ಕಮ್ಮಿ: ಸಮೀಕ್ಷೆ

The New Indian Express
ಬೆಂಗಳೂರು, ಅ.13:ಭಾರತದಾದ್ಯಂತ ನಾನಾ ಇಂಗ್ಲಿಷ್ ಪತ್ರಿಕೆಗಳ ಪ್ರಸಾರ ಸಂಖ್ಯೆ ಇಳಿಮುಖವಾಗುತ್ತಿದೆ. 2009 ರ ಜನವರಿಯಿಂದ ಜೂನ್ ವರೆಗಿನ ಅವಧಿಗೆ ನಡೆಸಲಾದ ಪತ್ರಿಕೆ ಪ್ರಸಾರ ಸಂಖ್ಯೆ ಅಧ್ಯಯನ ಈ ಅಂಶವನ್ನು ಹೊರಹಾಕಿದೆ. ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಶನ್ ( ABC) ಅಂಕಿಅಂಶಗಳ ಪ್ರಕಾರ 52 ಇಂಗ್ಲಿಷ್ ಪತ್ರಿಗೆಳ ನಾನಾ ಆವೃತ್ತಿಗಳ ಪೈಕಿ 7 ಆವೃತ್ತಿಗಳನ್ನು ಹೊರತುಪಡಿಸಿದರೆ ಉಳಿದ 47 ಪತ್ರಿಕೆಗಳ ಪ್ರಸಾರ ಕುಗ್ಗಿದೆ.

ಎಬಿಸಿ ಸಂಸ್ಥೆಯು ವರ್ಷಕ್ಕೆ ಎರಡು ಬಾರಿ ಸಮೀಕ್ಷೆ ನಡೆಸುತ್ತದೆ. ಕಳೆದ ಸಮೀಕ್ಷೆ ಜುಲೈ - ಡಿಸೆಂಬರ್ 2008 ರಲ್ಲಿ ನಡೆದಿತ್ತು. ಆಗ ಅಧ್ಯಯನಕ್ಕೆ ಒಳಪಡಿಸಿದ 49 ಪತ್ರಿಕೆಗಳ ಪೈಕಿ 20 ಎಡಿಷನ್ ಗಳು ಪ್ರಸಾರ ಹೆಚ್ಚು ಮಾಡಿಕೊಂಡಿದ್ದವು. ಅಂತೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಪತ್ರಿಕಾ ಪ್ರಸರಣ ಕ್ಷೇತ್ರಕ್ಕೂ ತಟ್ಟಿತೆಂದು ಹೇಳಲಡ್ಡಿಯಿಲ್ಲ.

ಭಾರತದಲ್ಲಿ ವೃದ್ಧಿಸುತ್ತಿರುವ ಬ್ರಾಡ್ ಬ್ಯಾಂಡ್ ಸಂಪರ್ಕವೂ ಈ ವಿದ್ಯಮಾನಕ್ಕೆ ಕಾರಣವಾಗಿದೆ. ಮನೆಯಲ್ಲಿ ಇಂಟರ್ ನೆಟ್ ಇದ್ದರೆ ಒಂದಲ್ಲ ಹತ್ತು ಪತ್ರಿಕೆಗಳನ್ನು ಓದಬಹುದು. ಇದೇ ವೇಳೆ, ಖರ್ಚು ವೆಚ್ಚಗಳನ್ನು ತಗ್ಗಿಸಿ, ಜಾಹಿರಾತು ವರಮಾನವನ್ನು ಹೆಚ್ಚಿಸುವುದರ ಮೂಲಕ ಓದುಗರಿಗೆ ಕೈಗೆಟಕುವ ದರದಲ್ಲಿ ಪತ್ರಿಕೆ ಹಂಚಲು ಪತ್ರಿಕೆಗಳ ಆಡಳಿತ ವರ್ಗಗಳು ತಿಪ್ಪರಲಾಗ ಹಾಕುತ್ತಿವೆ. 2 ರೂಪಾಯಿಗೆ ಸಿಗುವ ಇಂಗ್ಲಿಷ್ ಪತ್ರಿಕೆಗಳೂ ಭಾರತದಲ್ಲಿವೆ.

ಪ್ರಸಾರ ಸಂಖ್ಯೆ ಇಳಿಮುಖವಾಗಿರುವ ಕೆಲವು ಪತ್ರಿಕೆಗಳ ಸ್ಥೂಲ ನೋಟ ಹೀಗಿದೆ:

* ಬೆಂಗಳೂರು ಮಿರರ್ ಶೇ. 29.79 ( ಹಾಲಿ ಪ್ರಸಾರ ಸಂಖ್ಯೆ 88,350 )
* ಡೆಕ್ಕನ್ ಹೆರಾಲ್ಡ್ ಶೇ 6.89 ( ಪ್ರಸಾರ 2.1 ಲಕ್ಷ )
* ದಿ ಹಿಂದೂ ಬಿಸಿನೆಸ್ ಲೈನ್ ಶೇ. 5 ( ಪ್ರಸಾರ 1.63 ಲಕ್ಷ)
* ಇಕನಾಮಿಕ್ ಟೈಮ್ಸ್ (ಎಲ್ಲ ಎಂಟು ಎಡಿಷನ್ ಗಳು ಇಳಿಮುಖ ಶೇ. 11.76 - ಪ್ರಸಾರ 2.03)
* ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಶೇ. 10.4 ( ಪ್ರಸಾರ 3.09 )
* ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರು, ಮಂಗಳೂರು, ಮೈಸೂರು ಶೇ. 4.4 ( ಪ್ರಸಾರ 4.83 )
* ಮುಂಬೈ , ಲಕ್ನೋ, ಅಹಮದಾಬಾದ್, ನವದೆಹಲಿ ಮತ್ತು ನಾಗಪುರದಲ್ಲೂ ಟೈಮ್ಸ್ ಪ್ರಸಾರ ಸಂಖ್ಯೆ ಗಣನೀಯ ಇಳಿಮುಖ ಕಂಡಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+