ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷಿದ್ಧ ಮಾದಕ ಪದಾರ್ಥ ಹೊಂದಿದ್ದ ಡೀಜೆ ಬಂಧನ

|
Google Oneindia Kannada News

Banned drug Hashish
ಬೆಂಗಳೂರು, ಅ. 10 : ಒಂದು ಲಕ್ಷ ಬೆಲೆಯ ನಿರ್ಬಂಧಿತ ಮಾದಕ ಪದಾರ್ಥವನ್ನು ಹೊಂದಿದ ಆರೋಪದ ಮೇಲೆ ನಗರದ ಡೀಜೆ (ಡಿಸ್ಕ್ ಜಾಕಿ)ಯನ್ನು ಕೇಂದ್ರ ಅಪರಾಧ ಪಡೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

23 ವರ್ಷದ ನಿಶ್ಚಿತ್ ಲಾಲ್ವಾನಿ ಎಂಬಾತ 354 ಗ್ರಾಂ ತೂಕದ ಹಶಿಶ್ (ಕ್ಯಾನಾಬಿಸ್) ಮಾದಕ ಪದಾರ್ಥವನ್ನು ಹೊಂದಿದ್ದ. ಲಾಲ್ ಬಾಗ್ ರಸ್ತೆಯಲ್ಲಿರುವ ರಾಂಕಾ ಪಾರ್ಕ್ ಅಪಾರ್ಟ್ ಮೆಂಟಿನ ನಿವಾಸಿಯಾಗಿರುವ ನಿಶ್ಚಿತ್ 2003ರಿಂದ ಬೆಂಗಳೂರಿನಲ್ಲಿ ಅನೇಕ ನೈಟ್ ಕ್ಲಬ್ ಗಳಲ್ಲಿ ಡೀಜೆಯಾಗಿ ಕೆಲಸ ಮಾಡುತ್ತಿದ್ದಾನೆ.

"ದೊರೆತ ಖಚಿತ ಸುಳಿವಿನ ಮೇರೆಗೆ ಆತನನ್ನು ಆತನ ಫ್ಯಾಟಿನಲ್ಲಿ ಮಾದಕ ಪದಾರ್ಥ ಸಮೇತ ಬಂಧಿಸಿದ್ದೇವೆ. ಇತ್ತೀಚೆಗೆ ಆತ ಗೋವಾಕ್ಕೆ ತೆರಳಿದ್ದ. ಅಲ್ಲಿ ಈ ಪದಾರ್ಥವನ್ನು ಕೊಂಡ ನಿಶ್ಚಿತ್ ಮಾದಕ ಪದಾರ್ಥ ವ್ಯಸನಿಗಳಿಗೆ ಮಾರುವ ಹುನ್ನಾರ ಹೊಂದಿದ್ದ" ಎಂದು ಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ಬಂಧಿತ ಮಾದಕ ಪದಾರ್ಥ ಹೊಂದಿದ್ದು, ಮಾರಾಟ ಮಾಡುತ್ತಿದ್ದ ಆರೋಪ ಸಾಬೀತಾದರೆ ನಾರ್ಕೋಟಿಕ್ ಡ್ರಗ್ಸ್ ಸೈಕೋಟ್ರೋಪಿಕ್ ಸಬ್ ಸ್ಟನ್ಸಸ್ ಆಕ್ಟ್ ಪ್ರಕಾರ ನಿಶ್ಚಿತ್ 10 ವರ್ಷ ಕಂಬಿ ಎಣಿಸುವುದು ಖಚಿತ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಅನೇಕ ನೈಟ್ ಕ್ಲಬ್ ಮತ್ತು ಡಿಸ್ಕೋಥೆಕ್ ಗಳು ಮಾದಕ ಪದಾರ್ಥ ಮಾರಾಟ ಮಾಡುವ ಕೇಂದ್ರಗಳಾಗುತ್ತಿವೆ. ಇದಕ್ಕೆ ಯುವಕರೇ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X