ಮುಸ್ಲಿಂ ಜನಸಂಖ್ಯೆ : ಮೂರನೇ ಸ್ಥಾನಕ್ಕೆ ಭಾರತ ತೃಪ್ತಿ

ಅಮೆರಿಕಾ ಮೂಲದ ಧಾರ್ಮಿಕ ಮತ್ತು ಸಾರ್ವಜನಿಕ ಕುರಿತಾದ ವೇದಿಕೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಇಂಡೋನೇಷ್ಯಾ ಮತ್ತು ಪಾಕಿಸ್ತಾನದಲ್ಲಿ ಕ್ರಮವಾಗಿ 20 ಮತ್ತು 17.4 ಕೋಟಿ ಮುಸ್ಲಿಮರಿದ್ದಾರೆ. ವರದಿ ಪ್ರಕಾರ ಟಾಪ್ 10 ಪಟ್ಟಿಯಲ್ಲಿ ಇರುವ ಇತರ ರಾಷ್ಟ್ರಗಳೆಂದರೆ ಬಾಂಗ್ಲಾದೇಶ, ಈಜಿಪ್ಟ್ , ನೈಜೀರಿಯಾ, ಇರಾನ್, ಟರ್ಕಿ, ಆಲ್ಜೀರಿಯಾ ಮತ್ತು ಮೊರಾಕ್ಕೋ.
ಈ ವರದಿ ಪ್ರಕಾರ ವಿಶ್ವದ ಒಟ್ಟು ಮುಸ್ಲಿಮರ ಪೈಕಿ ಶೇ.10.3 ಮುಸ್ಲಿಮರು ಭಾರತದಲ್ಲಿದ್ದಾರೆ. ಮುಸ್ಲಿಂ ರಾಷ್ಟ್ರಗಳಾದ ಸಿರಿಯಾ, ಜೋರ್ಡಾನ್ ಮತ್ತು ಲಿಬಿಯಾ ದೇಶಗಳಲ್ಲಿನ ಮುಸ್ಲಿಂ ಜನಸಂಖ್ಯೆಗಿಂತ ಜಾಸ್ತಿ ಚೀನಾ ಮತ್ತು ರಷ್ಯಾ ದೇಶದಲ್ಲಿದ್ದಾರೆ. ಒಟ್ಟು ಮುಸ್ಲಿಂ ಜನಸಂಖ್ಯೆಯಲ್ಲಿ ಷಿಯಾ ಶೇ. 13 ಸುನ್ನಿ ಶೇ. 87 ಪಂಗಡದವರಿದ್ದಾರೆ.
(ಏಜನ್ಸೀಸ್)












Click it and Unblock the Notifications