ಇನ್ಫಿಗೆ 2ನೇ ತ್ರೈಮಾಸಿಕದಲ್ಲಿ ಲಾಭ

ಕಳೆದ ವರ್ಷ ಎರಡನೇಯ ಆರ್ಥಿಕ ವರ್ಷದಲ್ಲಿ ಕಂಪನಿಯೂ 1,432 ಕೋಟಿ ರುಪಾಯಿ ಲಾಭ ಗಳಿಸಿತ್ತು. ಈ ವರ್ಷದ ಅದೇ ಅವಧಿಯಲ್ಲಿ ತನ್ನ ಲಾಭದ ಗಳಿಕೆ ಶೇ. 1.3 ರಷ್ಟು ಹೆಚ್ಚಿಸಿಕೊಂಡಿದೆ. 1,540 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ. ಅಂದರೆ ಒಟ್ಟು 5,821 ಕೋಟಿ ರುಪಾಯಿಗಳ ವಹಿವಾಟು ನಡೆಸಿದೆ. ಆರ್ಥಿಕ ಕುಸಿತ ನಿಧಾನವಾಗಿ ಮರೆಯಾಗುತ್ತಿದ್ದು, ಅನೇಕ ಯೋಜನೆಗಳು, ಪ್ರಮುಖ ಗ್ರಾಹಕರು ಕಂಪನಿ ಕಡೆಗೆ ಮುಖ ಮಾಡಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಗೋಪಾಲಕೃಷ್ಣನ್ ಹೇಳಿದರು.
ಪ್ರಸ್ತುತ ಇನ್ಫಿಯಲ್ಲಿ 94,379 ನೌಕರರಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ಹೊಸದಾಗಿ 7,182 ನೌಕರರು ಕಂಪನಿಗೆ ಸೇರ್ಪಡೆಯಾಗಿದ್ದಾರೆ. ಉಳಿದ ಐಟಿ ಕಂಪನಿಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ನೌಕರರ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತಿವೆ. ಆದರೆ ಇನ್ಫಿ ಮಾತ್ರ ಯೋಜನೆ ಪ್ರಕಾರ ನೌಕರರನ್ನು ನೇಮಿಸಿಕೊಳ್ಳುತ್ತಿರುವ ಕಾರಣ ಲಾಭ ಗಳಿಕೆಯಲ್ಲಿ ಮುಂದುವರಿಯಲು ಸಾಧ್ಯವಾಗಿದೆ ಗೋಪಾಲಕೃಷ್ಣನ್ ಹೇಳಿದರು.
(ಏಜನ್ಸೀಸ್)












Click it and Unblock the Notifications