2016ರ ಒಲಿಂಪಿಕ್ಸ್ : ಬ್ರೇಜಿಲ್ ಗೆ ಒಲಿದ ಅದೃಷ್ಟ

Olympics 2016
ಕೋಪನ್ ಹೇಗನ್, ಅ. 4 : 2016ರ ಒಲಿಂಪಿಕ್ ಕ್ರೀಡಾಕೂಟದ ಅತಿಥ್ಯ ಅವಕಾಶ ಬ್ರೆಜಿಲ್ ರಿಯೋ ಡಿ ಜನೈರೋಗೆ ಒಲಿದಿದೆ. ಶನಿವಾರ ಇಲ್ಲಿ ನಡೆದ ಬಿಡ್ ನಲ್ಲಿ ತೀವ್ರ ಪೈಪೋಟಿ ನಡುವೆಯೂ ಬ್ರೇಜಿಲ್ 2016ರ ಒಲಿಂಪಿಕ್ ಕ್ರೀಡಾಕೂಟ ನಡೆಸುವ ಅವಕಾಶವನ್ನು ತನ್ನದಾಗಿಸಿಕೊಂಡಿತು. ರಿಯೋಡಿ ಜನೈರೋ ಪರ 66 ಮತಗಳು ಚಲಾವಣೆಯಾದರೆ, ಮ್ಯಾಡ್ರಿಡ್ ಗೆ 32 ಮತಗಳು ಬಿದ್ದವು.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಜಾಕ್ಸ್ ರಾಗ್ ಫಲಿತಾಂಶ ಪ್ರಕಟಿಸುತ್ತಿದ್ದಂತೆಯೇ ಸ್ಥಳದಲ್ಲಿ ಹಾಜರಿದ್ದ ಬ್ರೆಜಿಲ್ ನಿಯೋಗದ ಸಂಭ್ರಮ ಎಲ್ಲೆ ಮೀರಿತು. ನಿಯೋಗದ ಸದಸ್ಯರು ಒಬ್ಬರನೊಬ್ಬರನ್ನು ತಬ್ಬಿಕೊಂಡು ಸಂತಸ ಹಂಚಿಕೊಂಡರು. ಕೋಪನ್ ಹೇಗನ್ ನಲ್ಲಿ ಒಲಿಂಪಿಕ್ಸ್ ಆತಿಥ್ಯ ಪ್ರಕಟವಾಗುತ್ತಿದ್ದಂತೆಯೇ ಬ್ರೇಜಿಲ್ ನಲ್ಲ ಹಬ್ಬದ ವಾತಾವರಣ ನಿರ್ಮಾಣವಾಯಿತು. ಮನೆಗಳಿಂದ ಹೊರ ಬಂದ ಸಾವಿರಾರು ಮಂದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದರು.

2016ರ ಒಲಿಂಪಿಕ್ಸ್ ಆತಿಥ್ಯ ವಹಿಸಿಕೊಂಡ ಬ್ರೇಜಿಲ್ ಗೆ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ವಿಶ್ವದ ದೊಡ್ಡಣ್ಣ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವಾರು ದೇಶಗಳು ಬ್ರೇಜಿಲ್ ಗೆ ಅಬಿನಂದನೆಗಳು ಸಲ್ಲಿಸಿವೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+