ಏರ್ ಇಂಡಿಯಾ ಪೈಲೆಟ್ ಗಳ ಮುಷ್ಕರ ಅಂತ್ಯ

ವೇತನ ಕಡಿತವನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ಏರ್ ಇಂಡಿಯಾದ ಪೈಲೆಟ್ ಗಳು ಮುಷ್ಕರ ನಡೆಸುತ್ತಿದ್ದರು. ಪೈಲೆಟ್ ಗಳ ಮುಷ್ಕರಕ್ಕೆ ಕೇಂದ್ರ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದ್ದರು. ಪೈಲೆಟ್ ಗಳ ಬೇಡಿಕೆ ಈಡೇರಿಸಲಾಗುವು, ಪೈಲೆಟ್ ಗಳ ಮುಷ್ಕರದಿಂದ ಪ್ರಯಾಣಿತಕರಿಗೆ ತೀವ್ರ ತೊಂದರೆ ಉಂಟಾಗಲಿದ್ದು, ಕೂಡಲೇ ಕೆಲಸಕ್ಕೆ ಹಾಜರಾಗಬೇಕು ಎಂದು ಅವರು ಒತ್ತಾಯಿಸಿದ್ದರು.
ಇದರಿಂದ ಪೈಲೆಟ್ ಗಳು ಇಂದು ಬೆಳಗ್ಗೆ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಂಡಿರುವ ತೀರ್ಮಾನ ಘೋಷಿಸಿದ್ದಾರೆ. ಪೈಲೆಟ್ ಗಳ ಮುಷ್ಕರದಿಂದ ಪ್ರಯಾಣಿಕರು ಅನುಭವಿಸಿದ ತೊಂದರೆಗೆ ಪೈಲೆಟ್ ಗಳ ಸಂಘ ಕ್ಷಮೆಯಾಚಿಸಿದೆ.
(ಏಜನ್ಸೀಸ್)












Click it and Unblock the Notifications