ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗಾ : ಉದ್ಯಾನವನ ಅಭಿವೃದ್ಧಿಗೆ 1.3 ಕೋ ರು

By Staff
|
Google Oneindia Kannada News

Yeddyurappa
ಗುಲ್ಬರ್ಗಾ, ಸೆ. 24 : ಗುಲ್ಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮರತೂರಿನ ಅಮರ ಚೇತನ ವಿಜ್ಞಾನೇಶ್ವರರ ಉದ್ಯಾನವನ ಅಭಿವೃದ್ಧಿಪಡಿಸಲು 1.30 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಗುಲಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮರತೂರಿನಲ್ಲಿ ವಿಜ್ಞಾನೇಶ್ವರ ಉದ್ಯಾನವನದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ವಿಜ್ಞಾನೇಶ್ವರರ ಸಾಹಿತ್ಯವು 11 ನೇ ಶತಮಾನದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಅವರು ರಚಿಸಿದ ಮಿತಾಕ್ಷರ ಕೃತಿಯಲ್ಲಿ ಆ ಕಾಲದಲ್ಲಿಯೇ ಕಾನೂನು ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗಳ ಬಗ್ಗೆ ಚರ್ಚಿಸಿದ್ದಾರೆ.

ಭಾರತೀಯ ಕಾನೂನು ವ್ಯವಸ್ಥೆಯನ್ನು ನಿಯಂತ್ರಿಸುವ ಅಂಶಗಳು ಸಹ ಈ ಕೃತಿಯಲ್ಲಿವೆ. ವಿಜ್ಞಾನೇಶ್ವರರ ಸ್ಮರಣಾರ್ಥ ಮರತೂರಿನಲ್ಲಿ ಸರ್ಕಾರಿ ಕಾನೂನು ಮಹಾವಿದ್ಯಾಲಯ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಮರತೂರನ್ನು ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಸೇರಿಸಿದ್ದೇವೆ. ಜನರು ನಾಡಿನ ಮೂಲೆ ಮೂಲೆಯಿಂದ ಬಂದು ಈ ಗ್ರಾಮವನ್ನು ವಿಜ್ಞಾನೇಶ್ವರ ಉದ್ಯಾನವನವನ್ನು ನೋಡುವಂತಾಗಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಮರತೂರಿನ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಅವರು, ಈ ದೇವಸ್ಥಾನದ ಅಭಿವೃದ್ಧಿಗೆ 50 ಲಕ್ಷ ರೂ. ಮಂಜೂರು ಮಾಡಲಾಗುವುದು. ಮೊದಲ ಕಂತಿನ 25 ಲಕ್ಷ ರೂ. ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X