ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ದಾಖಲೆಗೆ ಬೆಂಗಳೂರಿನಲ್ಲಿ ಮುದ್ರೆ

By Staff
|
Google Oneindia Kannada News

ಬೆಂಗಳೂರು, ಸೆ. 22 : ವೀಸಾ ಪಡೆಯಲು ಅಗತ್ಯವಾಗಿರುವ ದಾಖಲೆಗಳಿಗೆ ಋಜುವಾತು ಮುದ್ರೆ ಹಾಗೂ ಪತ್ರಗಳನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಮಾಡಲಾಗುವುದು. ವೀಸಾ ಪಡೆಯಲು ಉತ್ಸುಕರಾಗಿರುವವರು ಇನ್ನುಮುಂದೆ ತಮ್ಮ ಪತ್ರಗಳನ್ನು ಈ ಕೆಳಕಂಡ ವಿಳಾಸದಲ್ಲಿ ಅಧಿಕೃತಗೊಳಿಸಿಕೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಳಾಸ ಹೀಗಿದೆ:

ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, 2ನೇ ಮಹಡಿ, ಬಿಎಂಟಿಸಿ ಕಟ್ಟಡ, ಕೆ.ಎಚ್. ರಸ್ತೆ, ಶಾಂತಿನಗರ, ಬೆಂಗಳೂರು. ಕಚೇರಿ ಕೆಲಸ ನಿರ್ವಹಿಸುವ ಯಾವುದೇ ದಿನದಂದು ಅಪರಾನ್ಹ 3ರಿಂದ 5 ಗಂಟೆಯವರೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಭೆಟ್ಟಿಯಾಗಬಹುದು.

ಓದುಗರ ಕೋರಿಕೆಯ ಮೇರೆಗೆ...

ವಿದೇಶಕ್ಕೆ ಹೋಗುವ ಮುನ್ನ ಪ್ರಯಾಣಿಕ ಅನೇಕ ಉಸಾಬರಿಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾದುದು ವೀಸಾ. ವೀಸಾ ಯಾವುದೇ ದೇಶಕ್ಕಾಗಿರಬಹುದು, ಆದರೆ, ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ಅಗತ್ಯವಾಗಿ ಅಟೆಸ್ಟ್, ಅಥೆಂಟಿಕೇಟ್ ಮಾಡಿಸಬೇಕಾಗುತ್ತದೆ. ಅಟೆಸ್ಟ್ ಆದ ನಂತರ ವೀಸಾ ಕಚೇರಿಗೆ ಪ್ರಸಯಾಣ!!

ಈ ಅಟೆಸ್ಟೇಷನ್ ಗಾಗಿ ವಿಧಾನಸೌಧವನ್ನು ಪ್ರದಕ್ಷಿಣೆ ಹಾಕುವ, ಗೃಹ ಇಲಾಖೆಯ ಸ್ಟ್ಯಾಂಪು ಸಿಗ್ನೇಚರುಗಳಿಗಾಗಿ ಅಂಗಲಾಚ ಬೇಕಾಗುತ್ತದೆ. ಈ ತಾಪತ್ರಯವನ್ನು ತಪ್ಪಿಸುವ ಉದ್ದೇಶಕ್ಕಾಗಿಯೇ ಕರ್ನಾಟಕ ರಾಜ್ಯ ಒಂದು ವಿಶೇಷ ಕಚೇರಿ ತೆರೆದಿದ್ದು ವಿದೇಶ ಪ್ರಯಾಣಾರ್ಥಿಗಳು (ವೀಸಾಗೆ ಪ್ರಯತ್ನಿಸುವವರು) ಅಲ್ಲಿ ದಾಖಲೆ ಪತ್ರಗಳನ್ನು ಅಟೆಸ್ಟ್ ಮಾಡಿಸಿಕೊಳ್ಳಬಹುದು.

ವಿದೇಶಕ್ಕೆ ತೆರಳುವ ಉದ್ಯೋಗಾರ್ಥಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಮುಖ್ಯವಾಗಿ ಉತ್ತರ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದವರಿಗೆ ಈ ಕಚೇರಿಯಿಂದ ಮಹದುಪಕಾರವಾಗಿದೆ. ವಿಧಾನಸೌಧದ ಹಂಗು ತೊರೆದು, ಅಟೆಸ್ಟೇಷನ್ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸುವುದೇ ಈ ಪ್ರಯತ್ನದ ಉದ್ದಿಶ್ಯವಾಗಿದೆ.

ಈಗ ನಿಮ್ಮ ವೀಸಾ ದಾಖಲೆಗಳನ್ನು ಯಾರಾರ ಬಳಿ ಕೊಂಡೊಯ್ದು ಅಟೆಸ್ಟೇಷನ್ ಮಾಡಿಸಿಕೊಳ್ಳಬಹುದು ಎಂಬ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇವೆ, ಗುರುತು ಹಾಕಿಕೊಳ್ಳಿರಿ, ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿರಿ - ಸಂಪಾದಕ.

* Additional regional commissioner (administration) and additional regional commissioners (development) of Gulbarga, Belgaum and Mysore with respect to documents/ issues in their respective revenue regions in addition to that of the regional commissioner of the regions.

* The regional commissioner, Bangalore and additional regional commissioner (administration), Bangalore region are authorized to attest/ authenticate documents issued in the Bangalore revenue region in addition to the joint secretary to government, home department (police services) and the under secretary to government, home department (passport and foreigners)

* The attestation is done as per the guidelines issued by the ministry of human resource development. It is done only after verification by authorities concerned / police and after collecting a fee of Rs 100 per original document and Rs 5 as court fee stamp.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X