37567ಹುಟ್ಟುಹಬ್ಬಬೇಂದ್ರೆ ಮಾಸ್ತರರ ಕುರುಡು ಕಾಂಚಾಣ/literature/poem/2009/0130-money-is-what-money-does-bendre-birthday.htmlಶನಿವಾರ(ಜ.31)ಧಾರವಾಡದ ದೇಸಿ ಸೊಗಡಿನ ವರಕವಿ ಬೇಂದ್ರೆ ಮಾಸ್ತರರ 131ನೇ ಹುಟ್ಟುಹಬ್ಬ.'ಶಬ್ದ ಗಾರುಡಿಗ' ಅಂಬಿಕಾತನಯದತ್ತ ಮಾಡಿದ ಮೋಡಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಇಂದಿನ ಭ್ರಷ್ಟ ವ್ಯವಸ್ಥೆ, ದುಡ್ಡಿನ ಹಿಂದೆ ಬಿದ್ದು ಸಮಾಜ ಸ್ವಾಸ್ಥ್ಯ ಕೆಡಿಸುವ ರಾಜಕಾರಣಿಗಳು ಅಧಿಕಾರಿಗಳನ್ನು ಧಿಕ್ಕರಿಸುವ ಗೀತ 'ಕುರುಡು ಕಾಂಚಾಣ' ಕವಿಯ ಹುಟ್ಟುಹಬ್ಬಕ್ಕೆ ಕಾಂಚಾಣದ ಕೊಡುಗೆ !ರಚನೆ: ಅಂಬಿಕಾತನಯದತ್ತ(ದ.ರಾ.ಬೇಂದ್ರೆ)ಕವನ ಸಂಕಲನ:ನಾದಲೀಲೆಕುರುಡು ಕಾಂಚಾಣ ಕುಣಿಯುತಲಿತ್ತುಕಾಲಿಗೆ ಬಿದ್ದವರ ತುಳಿಯುತಲಿತ್ತೊsಕುರುಡು 34380http://kannada.oneindia.com/img/2009/01/30-bendre4.jpg37567ಹುಟ್ಟುಹಬ್ಬಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು!/movies/hero/2009/02/16-happy-birthday-to-challenging-star-darshan.htmlಕನ್ನಡ ಚಿತ್ರ ಪ್ರೇಮಿಗಳ ಹೃದಯ ಗೆದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್(32) ತಮ್ಮ ಹುಟ್ಟು ಹಬ್ಬವನ್ನು ಫೆಬ್ರವರಿ 16ರಂದು ಸರಳ ಸುಂದರವಾಗಿ ಆಚರಿಸಿಕೊಂಡರು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂದೆ ದರ್ಶನ್ ಅಭಿಮಾನಿಗಳು ನೆರೆದಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಈ ವಿಶೇಷ ಸಂದರ್ಭದಲ್ಲಿ ದರ್ಶನ್ ರ ಯಾವ ಹೊಸ ಚಿತ್ರವೂ ಸೆಟ್ಟೇರಲಿಲ್ಲ. ಹಾಗಾಗಿ ಅಭಿಮಾನಿಗಳು 34676http://kannada.oneindia.com/img/2009/02/16-darshan11.jpg37567ಹುಟ್ಟುಹಬ್ಬದರ್ಶನ್ ಹುಟ್ಟುಹಬ್ಬದ ಸವಿಸವಿ ನೆನಪುಗಳು/movies/hero/2009/02/18-kannada-actor-darshan-birthday-party.htmlಕನ್ನಡ ನಾಯಕ ನಟ ದರ್ಶನ್ ಅವರು ಮೊನ್ನೆ ಸೋಮವಾರ ಬೆಂಗಳೂರಿನಲ್ಲಿ ತಮ್ಮ 32 ನೆ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡರು. ಭಾವನಾತ್ಮಕವಾಗಿರಲಿ ಅಥವಾ ಮಚ್ಚು ಲಾಂಗುಗಳನ್ನು ಹಿಡಿದು ಠಳಾಯಿಸುವ ಪಾತ್ರವೇ ಆಗಲೀ ತಮ್ಮ ಪಾತ್ರಗಳಿಗೆ ಜೀವ ತುಂಬುವ ಆಕರ್ಷಕ ನಿಲುವಿನ ನಟನಿಗೆ ಅವರ ಅಭಿಮಾನಿಗಳು, ಜತೆಗಾರ ನಟರು,ನಿರ್ದೇಶಕರು ಅಂದು ಶುಭ ಕೋರಿದರು.ಹೋಟೆಲು, ರೆಸಾರ್ಟು ಅಥವಾ ಶೂಟಿಂಗ್ ತಾಣದಲ್ಲೆ ಕೆಲವು 34720http://kannada.oneindia.com/img/2009/02/18-darshan-birthday-party1.jpg37567ಹುಟ್ಟುಹಬ್ಬಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬ/literature/music/2009/0317-kannada-poet-putina-gokula-nirgamana-lyrics.htmlಕನ್ನಡ ಸಾಹಿತ್ಯ ಲೋಕದ ಇಬ್ಬರು ದಿಗ್ಗಜರಾದ ದಾರ್ಶನಿಕ ಕವಿ ಡಿ ವಿ ಗುಂಡಪ್ಪ, ಪು ತಿ ನ ಅವರು ಮಾರ್ಚ್ 17 ರಂದು ಜನಿಸಿರುವುದು ವಿಶೇಷ. ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ 1905 ಮಾರ್ಚ್ 17 ರಂದು ಜನಿಸಿದರು. ಇವರು 'ಗೋಕುಲ ನಿರ್ಗಮನ' ಸೇರಿದಂತೆ 11 ಕವನಸಂಕಲನಗಳನ್ನು ಹೊರತಂದರು. ಆಧ್ಯಾತ್ಮ, ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಇವರ 35283http://kannada.oneindia.com/img/2009/03/17-putina2.jpg37567ಹುಟ್ಟುಹಬ್ಬಇಪ್ಪತ್ಯೋಳಕ್ಕೇ ಮೂವತ್ತಾಯ್ತಂದ್ರೆ ಎಂಗೆ ಸಿವಾ?/column/humor/2009/0416-birthday-bash-poornima-bhat-london.htmlಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ 'ಗುಡ್ ಮಾರ್ನಿಂಗ್" ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ" ಅಂತ ಕಿವಿಯಲ್ಲಿ ಉಸುರಿದ. 'ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ 35996http://kannada.oneindia.com/img/2009/04/16-poornima-bhat2.jpg111035ಸುದೀಪ್ಕನ್ನಡ ಚಿತ್ರರಂಗ 2008; ಗೆದ್ದಿದ್ದು ಕೇವಲ ಇಪ್ಪತ್ತು/movies/headlines/2008/12/31-kannada-cinema-2008.html2008ರಲ್ಲಿ ಕನ್ನಡ ಚಿತ್ರರಂಗದಲ್ಲಿ ಅಗ್ರಪಟ್ಟವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಕಟ್ಟಬಹುದು. ಅವರ ನಾಯಕತ್ವ 'ಬುದ್ಧವಂತ' ಚಿತ್ರ ಬಾಕ್ಸಾಪೀಸನ್ನು ಕೊಳ್ಳೆಹೊಡೆಯುವುದರ ಜೊತೆಗೆ ಅವರ ವೃತ್ತಿ ಜೀವನಕ್ಕೆ ಪುರರ್ಜನ್ಮ ನೀಡಿದ ಚಿತ್ರವೂ ಹೌದು. 2008ರಲ್ಲಿ ಬಿಡುಗಡೆಯಾದ 118 ಕನ್ನಡ ಚಿತ್ರಗಳಲ್ಲಿ 20 ಚಿತ್ರಗಳು ಮಾತ್ರ ಹಿಟ್ ಆಗಿವೆ. ಅದರಲ್ಲಿ ಭರ್ಜರಿ ಜಯ, ಅವರೇಜ್, ಒಂದ್ಸಲ ನೋಡಬಹುದು ಎನ್ನುವ ಚಿತ್ರಗಳು 33799http://kannada.oneindia.com/img/2008/12/31-upendra-buddhivantha1e.jpg111035ಸುದೀಪ್ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ/movies/controversy/2009/01/02-veera-madhakari-title-controversy.html'ವೀರ ಮದಕರಿ' ಹೆಸರನ್ನು ಕನ್ನಡ ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿರುವ ಬಗ್ಗೆ ಚಿತ್ರದುರ್ಗದ ಹಿರಿಯ ಸಾಹಿತಿ ಬಿ.ಎಲ್.ವೇಣು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಐತಿಹಾಸಿಕ ಮಹತ್ವವುಳ್ಳ ವೀರ ಮದಕರಿ ಹೆಸರು ದುರುಪಯೋಗವಾಗುತ್ತಿದೆ ಎಂದುಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಆ ವಿಚಾರವನ್ನು ನಟ ಸುದೀಪ್ ಕೆದಕುವ ಮೂಲಕ ಆ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. 33833http://kannada.oneindia.com/img/2009/01/02-sudeep-madakari1.jpg111035ಸುದೀಪ್ಚಿತ್ರೀಕರಣದಲ್ಲೇ ಶತದಿನ ಕಂಡ ವೀರ ಮದಕರಿ!/movies/studio/2009/01/13-veera-madakari-and-kalakaar-complete-dubbing.htmlವೀರ ಮದಕರಿಚಿತ್ರ ಬಿಡುಗಡೆಯಾದ ಮೇಲೆ ಶತದಿನೋತ್ಸವ ಆಚರಿಸುವುದು ವಾಡಿಕೆ. ಆದರೆ ನಮ್ಮ 'ವೀರ ಮದಕರಿ' ಚಿತ್ರೀಕರಣದಲ್ಲೇ ಶತದಿನ ಕಂಡ ಸಂತಸದಲಿದ್ದಾನೆ. ಕರ್ನಾಟಕದ ಹೆಮ್ಮೆಯ ತಾಣಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ಮುಂತಾದ ಕಡೆ ಚಿತ್ರಕ್ಕೆ ನೂರುದಿನಗಳ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಕರಿಸುಬ್ಬು ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ಕೂಡ ಮುಗಿದಿದೆ ಎಂದು ನಿರ್ಮಾಪಕ ದಿನೇಶ್‌ಗಾಂಧಿ ತಿಳಿಸಿದ್ದಾರೆ. ಆರೋಗ್ಯ 34050http://kannada.oneindia.com/img/2009/01/13-harishraj-kalakar2e.jpg111035ಸುದೀಪ್ವರ್ಮಾರ ಫೂಂಕ್ ಭಾಗ 2ರಲ್ಲಿ ಸುದೀಪ್ /movies/hero/2009/01/16-sudeep-to-act-in-vermas-phoonk-2.htmlನಟ ಸುದೀಪ್ ಬಾಲಿವುಡ್ ಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಈ ಹಿಂದೆ ಅವರು ರಾಮ್ ಗೋಪಾಲ್ ವರ್ಮಾರ 'ಫೂಂಕ್' ಚಿತ್ರದಲ್ಲಿ ನಟಿಸಿ ಸುದ್ದಿ ಮಾಡಿದ್ದರು. ಆದರೆ ಆ ಚಿತ್ರ ಅಷ್ಟಾಗಿ ಓಡಲಿಲ್ಲ ಎಂಬುದು ಬೇರೆ ಮಾತು. ಈಗ ಫೂಂಕ್ ಭಾಗ 2ರನ್ನು ರಾಮ್ ಗೋಪಾಲ್ ವರ್ಮಾ ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದಲ್ಲೂ ನಟಿಸುವ ಅವಕಾಶ ಸುದೀಪ್ ಗೆ ಸಿಕ್ಕಿದೆ. 34105http://kannada.oneindia.com/img/2009/01/16-sudeep-shantinivasa1.jpg111035ಸುದೀಪ್ಮೇಘವೇ ಮೇಘವೇ ಸೇರಿ ಮೂರು ಚಿತ್ರಗಳು ತೆರೆಗೆ/movies/headlines/2009/01/29-meghave-meghave-among-three-on-friday.html'ಅಂಬಾರಿ', 'ಮೇಘವೇ ಮೇಘವೇ' ಮತ್ತು 'ಚಂದ್ರಗಿರಿ ರಹಸ್ಯ' ಇವು ಈ ವಾರ ತೆರೆಕಾಣಲಿರುವ ಮೂರು ಚಿತ್ರಗಳು. ಅಂಬಾರಿ ಕಳೆದ ವಾರವೇ ತೆರೆ ಕಾಣಬೇಕಿತ್ತು, ಮೇಘವೇ ಮೇಘವೇ ಕಳೆದ ವರ್ಷ ಬಿಡುಗಡೆಯಾಗಬೇಕಿತ್ತು! ಕಾರಣಾಂತರಗಳಿಂದ ಈ ಎರಡು ಚಿತ್ರಗಳು ವಾರ ತೆರೆಕಾಣಲಿವೆ.ಪೂರ್ಣ ಪ್ರಮಾಣದ ನಾಯಕ ನಟನಾಗಿ ಯೋಗೀಶ್ ಅಭಿನಯದ ಎರಡನೇ ಚಿತ್ರ ಅಂಬಾರಿ. ನಂದ ನಂದಿತಾ ನಂತರ ಅವರು 34353http://kannada.oneindia.com/img/2009/01/29-meghave-meghave1.jpgnews"> ಅಂತರ್ ಜಾಲಕ್ಕೆ ಮಧ್ಯವಯಸ್ಸಿನ ತಳಮಳ | Birth Day|Internet|Actor Sudeep|Broadband Connections|sam Pitroda | ಅಂತರ್ ಜಾಲಕ್ಕೆ ಮಧ್ಯವಯಸ್ಸಿನ ತಳಮಳ - Kannada Oneindia

ಅಂತರ್ ಜಾಲಕ್ಕೆ ಮಧ್ಯವಯಸ್ಸಿನ ತಳಮಳ

internet-is-40-years-old
ಎಲ್ಲರೂ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಾರೆ. ನಾನೇನು ಕಮ್ಮಿ. ಸಕಲ ಜೀವರಾಶಿಗಳ ಹುಟ್ಟು ಬೆಳವಣಿಗೆ ಸಾವುಗಳನ್ನು ದಾಖಲಿಸುವ ನಾನೂ ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಡವೆ. ನಾನೂ ಇವತ್ತು ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದೇನೆ, ಬನ್ನಿ ಎನ್ನುತ್ತಿದೆ ಅಂತರ್ಜಾಲ. ಹೌದು, ಇಂಟರ್ ನೆಟ್ಟಿಗೆ ಇವತ್ತು 40 ವರ್ಷ ತುಂಬಿತು. ಮಿಡಲ್ ಏಜ್ ಕ್ರೈಸಿಸ್ ಶುರುವಾಯಿತು ಎನ್ನೋಣವಾ?

ಅಂತರ್ ಜಾಲ ಹುಟ್ಟಿದ್ದು ಅಮೆರಿಕಾದಲ್ಲಿ. ಪಶ್ಚಿಮ ಕರಾವಳಿಯ, ಲಾಸ್ ಏಂಜಲಿಸ್ ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ. ತಾರೀಖು ಸೆಪ್ಟೆಂಬರ್ 2. ಇಸವಿ 1969. ಇಂಟರ್ ನೆಟ್ಟಿನ ಕಲ್ಪನೆಗೆ ಬುನಾದಿ ಹಾಕಿದವನ ಹೆಸರು ಕ್ಲಿನ್ ರಾಕ್. ಆತನ ಅನೇಕ, ನಿರಂತರ ಸಂಶೋಧನೆಗಳ ಫಲವೇ ಇಂಟರ್ ನೆಟ್. ಆತನ ಕೊಡುಗೆ ಇಲ್ಲದಿದ್ದರೆ ಇವತ್ತು ದಟ್ಸ್ ಕನ್ನಡ ಇರುತ್ತಿರಲಿಲ್ಲ. ನಮ್ಮ ಬರವಣಿಗೆ, ನಿಮ್ಮ ಓದುವಿಕೆ ಯಾವತ್ತೂ ಲಗತ್ತಾಗುತ್ತಿರಲಿಲ್ಲ. ನಮ್ಮ ಡಾಟ್ ಕಾಂ ವತಿಯಿಂದ ಅಂತರ್ ಜಾಲದ ಆದ್ಯ ಪ್ರವರ್ತಕ ಕ್ನಿನ್ ಗೆ ಶುಭಾಶಯಗಳು, ಕ್ಲಿನ್ ರಾಕ್ಸ್.

ಇಂಟರ್ ನೆಟ್ಟನ್ನು ಎಷ್ಟು ಜನ ಬಳಸುತ್ತಾರೆ, ಯಾಕೆ ಬೇಕು, ಯಾತಕ್ಕಾದರೂ ಬಳಸುತ್ತಾರೆ ಎಂಬ ಅಂಕಿ ಅಂಶಗಳು ಈಗ ಬೇಡ. ಮಲೆನಾಡಿನ ತೋಟದ ಮನೆಯಲ್ಲಿ , ಡಯಲ್ ಅಪ್ ಸಂಪರ್ಕದಲ್ಲಿ 56 ವರ್ಷದ ಅರ್ಚಕ ರಾಮಭಟ್ಟರು ಇಂಟರ್ ನೆಟ್ ಆನ್ ಮಾಡಿ ಏನನ್ನೋ ಹುಡುಕುತ್ತಿದ್ದಾರೆ ಎನ್ನುವುದಷ್ಟೆ ಮಾಹಿತಿ ನಿಮಗೆ ಸಾಕು. ಭಾರತದಲ್ಲಿ ಆಗುತ್ತಿರುವ ಜನಸಂಖ್ಯಾ ಸ್ಫೋಟಕ್ಕಿಂತ ವೇಗವಾಗಿ ಇಂಟರ್ ನೆಟ್ಟಿನ ಜಾಲ ಹಬ್ಬುತ್ತಿದೆ ಎಂದು ಹೇಳಿದರಷ್ಟೆ ಸಾಕಲ್ಲವೆ. ಮೊನ್ನೆಯ ಒಂದು ಸುದ್ದಿ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕಗಳು 100 ದಶಲಕ್ಷ ಏರಲಿದೆ ಎಂದು ಸ್ಯಾಮ್ ಪಿತ್ರೋಡ ಹೇಳಿದ್ದಾರೆ. ಅವರು ನಿಮ್ಮ ತಂದೆತಾಯಿ ಮತ್ತು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿರಬಹುದು.

ಇಂಟರ್ ನೆಟ್ಟಿನಲ್ಲಿ ಸಾಗರದಷ್ಟು ಮಾಹಿತಿ ಅಡಗಿರಬಹುದು. ಆದರೆ, ಅದನ್ನು ಬೊಗಸೆಯಲ್ಲಿ ತುಂಬಿಕೊಳ್ಳುವವರ ಮುಖ್ಯ ಸಮಸ್ಯೆ ವೇಗ. ಅಂದರೆ, ಇಂಟರ್ ನೆಟ್ ಸ್ಪೀಡ್. ಸ್ಪೀಡೂ ಇದ್ದು, ಕೈಬೆರಳುಗಳು ಚುರುಕಾಗಿದ್ದು, ಮಿದುಳು ಅದಕ್ಕಿಂತ ಚುರುಕಾಗಿದ್ದರೆ, ಉದಾಹರಣೆಗೆ ದಟ್ಸ್ ಕನ್ನಡದಲ್ಲಿ ಹತ್ತು ನಿಮಿಷಕ್ಕೊಮ್ಮೆ ಹೊಸ ಸುದ್ದಿ ಪ್ರತ್ಯಕ್ಷವಾಗುತ್ತದೆ. ಯೂನಿಕೋಡ್ ಸೌಲಭ್ಯ ಬಂದಾಗಿನಿಂದ ಕಟ್ ಅಂಟ್ ಪೇಸ್ಟ್ ಗಿರಾಕಿಗಳಿಗೆ ಕಾಪಿ ಮಾಡುವುದು ಒಂದು ನಿಮಿಷದ ಸುಗ್ಗಿಯಾಗಿದೆ. ಬೆಂಗಳೂರಿನಿಂದ ಆಕಾಶಕ್ಕೆ ಜಿಗಿಯುವ ಕನ್ನಡ ವರದಿಯನ್ನು ಕಾಪಿ ಮಾಡಲು ಚೆನ್ನೈ ಕನ್ನಡಿಗನಿಗೆ ಅರ್ಧ ನಿಮಿಷ ಬೇಕಾದಷ್ಟಾಯಿತು!

ಅಂದಹಾಗೆ, what is common with internet and Kannada actor kichha Sudeep ಎಂಬ ಒಂದು ಟೀಸರ್ ಅನ್ನು ಟೈಂಸ್ ಆಫ್ ಇಂಡಿಯಾ ತನ್ನ ಭಾನುವಾರದ ಸಂಚಿಕೆಯಲ್ಲಿ ಓದುಗರಿಗೆ ಹಾಕಿದರೆ Birth Day ಎಂದು ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುತ್ತಿರುವ ಕನ್ನಡ ಹುಡುಗ ಹುಡುಗಿಯರು ಥಟ್ಟನೆ ಉತ್ತರಿಸಿಯಾರು.

ಬಹುಶಃ ಭಾರತೀಯ ಭಾಷೆಗಳಲ್ಲಿ ಸುದ್ದಿ ಮಾಹಿತಿಗಳನ್ನು ಎಂದೂ ಪ್ರಸಾರ ಮಾಡಲೊಲ್ಲದ ರಿಡಿಫ್ ಇಂಗ್ಲಿಷ್ ವೆಬ್ ಸೈಟು ಇವತ್ತಿನ ಒಂದು ಪೋಸ್ಟ್ ನಲ್ಲಿ ಇಂಟರ್ ನೆಟ್ಟಿನ ಹುಟ್ಟು ಹಬ್ಬ ಆಚರಿಸಿದೆ. The Internet is 40 years old!ಎಂದು ಸಾರಿ ಹೇಳಿದೆ. ದಕ್ಷಿಣ ಕೊರಿಯಾ, ಸಿಂಗಪುರ, ನೆದರ್ ಲ್ಯಾಂಡ್ಸ್, ಡೆನ್ ಮಾರ್ಕ್ ಮತ್ತು ತೈವಾನ್ ನಲ್ಲಿ ಸ್ಪೀಡ್ ಅತಿಹೆಚ್ಚು ಎಂದು ರೀಡಿಫ್ ಡಾಟ್ ಕಾಮಿನ ಒಂದು ವರದಿ ಹೇಳುತ್ತದೆ. ಆದರೆ, ಇಂಟರ್ ನೆಟ್ಟಿನ ತವರು ಅಮೆರಿಕಾದಲ್ಲಿ ನೆಟ್ ಸ್ಲೋ ಎಂದೂ ಇದೇ ವರದಿಯಲ್ಲಿ ಹೇಳಲಾಗಿದೆ. ಬಹುಶಃ ಇದೇ ಒಂದು ಕಾರಣದಿಂದಾಗಿ ಕನ್ನಡದಲ್ಲಿ ಬರೆಯುವ ಅಮೆರಿಕನ್ನಡಿಗರ ಬರಹ ಉತ್ಪತ್ತಿಗೂ ರಿಸೆಷನ್ ಅಮರಿಕೊಂಡಿರಬಹುದು.

ಏನೇ ಬರಲಿ, ಇಂಟರ್ ನೆಟ್ ಇರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+