ಇನ್ಫಿ ಬಳಿ ಅಪಾರ ಹಣವಿದೆ : ಗೋಪಾಲಕೃಷ್ಣ

ಪ್ರಸಕ್ತ ವರ್ಷದ ಜೂನ್ ಅಂತ್ಯಕ್ಕೆ ದೇಶದ ಎರಡನೇ ಸಾಫ್ಟ್ ವೇರ್ ರಫ್ತು ಕಂಪನಿ ಎಂಬ ಹೆಗ್ಗಳಿಕೆಯ ಇನ್ಫಿ ಬಳಿ ನಗದು ಮತ್ತು ನಗದು ಸಮಾನ ಹಣ 12,039 ಕೋಟಿ ರುಪಾಯಿ ಇದೆ. ಇಂತಹ ಸಂದರ್ಭದಲ್ಲಿ ನಾವುಗಳು ಕಂಪನಿಗಳ ಖರೀದಿಗೆ ಮುಂದಾಗುತ್ತಿದ್ದೇವೆ. ಆದರೆ, ಸರಿಯಾದ ಕಂಪನಿಗಳು ಮತ್ತು ಸರಿಯಾದ ಬೆಲೆಗೆ ಸಿಕ್ಕರೆ ಸ್ವಾಧೀನಕ್ಕೆ ಮುಂದಾಗಬಹುದು ಎಂದರು.
ಜಾಗತಿಕ ಆರ್ಥಿಕ ಸಂಕಷ್ಟ ದೂರವಾಗಿದೆ ಎಂಬ ಸಂಗತಿಗೆ ಸಹಮತ ವ್ಯಕ್ತಪಡಿಸಿದ ಗೋಪಾಲಕೃಷ್ಣ, ನಾಸ್ಡಾಕ್ ನೋಂದಾಯಿತ ಇನ್ಫಿ ಅಮೆರಿಕ, ಮತ್ತು ಯುರೋಪ್ ರಾಷ್ಟ್ರಗಳನ್ನು ಬಿಟ್ಟು ಸ್ವಾಧೀನಕ್ಕೆ ಇತರೆ ಭಾಗಗಳತ್ತ ಕಣ್ಣು ಹಾಯಿಸಿದೆ ಎಂದು ಹೇಳಿದರು. ನಂದನ್ ನಿಲೇಕಣಿ ಅವರಿಲ್ಲದ ಇನ್ಫೋಸಿಸ್ ನಲ್ಲಿ ಬದಲಾವಣೆಯ ಪರ್ವ ಮುಗಿದಿದೆ. ಆ ಸ್ಥಾನಕ್ಕೆ ಯಾರನ್ನೂ ನಿಯುಕ್ತಿ ಮಾಡಿಲ್ಲವಾದರೂ ಕಂಪನಿಯ ಉನ್ನತಾಧಿಕಾರಿಗಳು ಅವರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
(ಏಜನ್ಸೀಸ್)












Click it and Unblock the Notifications