ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಹ್ಮದ್ ಅಲಿ ಜಿನ್ನಾ ಸ್ವಾರ್ಥಿ : ಖಾನ್

By Staff
|
Google Oneindia Kannada News

Mumtaz ali khan
ಮೈಸೂರು, ಆ. 31 : ಪಾಕಿಸ್ತಾನದ ಪಿತಾಮತ ಮೊಹ್ಮದ್ ಅಲಿ ಜಿನ್ನಾ ಅವರನ್ನು ಪ್ರಶಂಸಿಸುವ ಮೂಲಕ ಪಕ್ಷದ ಸಿದ್ಧಾಂತದ ವಿರುದ್ಧ ನಿಲುವು ತಾಳಿರುವ ಆರೋಪದಿಂದ ಹಿರಿಯ ನಾಯಕ ಜಸ್ವಂತ್ ಸಿಂಗ್ ಬಿಜೆಪಿ ಅಮಾನತುಗೊಂಡಿರುವ ಬೆನ್ನಲ್ಲೇ ರಾಜ್ಯದ ಅಲ್ಪಸಂಖ್ಯಾತರ ಖಾತೆ ಸಚಿವ ಮಮ್ತಾಜ್ ಅಲಿಖಾನ್ ಇದೇ ಮಾದರಿ ಹೇಳಿಕೆ ನೀಡಿದ್ದಾರೆ. ಅಖಂಡ ಭಾರತ ವಿಭಜನೆಗೆ, ಮೊಹ್ಮದ್ ಅಲಿ ಜಿನ್ನಾ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರೇ ಕಾರಣ ಎಂದು ಹೇಳುವ ಮೂಲಕ ವಿವಾದವನ್ನು ಕೆದಕುವ ಯತ್ನಕ್ಕೆ ಕೈಹಾಕಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಪುಸ್ತಕ ಕಲಾ ಸುರುಚಿಯ ಬೆಳ್ಳಿಹಬ್ಬದ ಅಂಗವಾಗಿ ಸಂವಹನ ಪ್ರಕಾಶ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಿನ್ನಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರು ತಮ್ಮ ಪುಸ್ತಕದಲ್ಲಿ ಜಿನ್ನಾ ಅವರನ್ನು ವೈಭವಿಕರಿಸಿರುವುದು ಸರಿಯಲ್ಲ. ಜಿನ್ನಾ ಸ್ವಲ್ಪ ಉದಾರಿಯಾಗಿ ನಡೆದುಕೊಂಡಿದ್ದರೆ, ಭಾರತ ಅಖಂಡವಾಗಿ ಉಳಿಯುತ್ತಿತ್ತು. ಅಖಂಡ ಭಾರತಕ್ಕೆ ಪ್ರಧಾನಿಯಾಗುವ ಆಕಾಂಕ್ಷೆ ಜಿನ್ನಾ ಅವರಲ್ಲಿತ್ತು. ಆದರೆ, ಇದಕ್ಕೆ ನೆಹರು ಅವಕಾಶ ಕೊಡಲಿಲ್ಲ. ಕೇವಲ 1 ವರ್ಷ ಒಂದು ಪ್ರಧಾನಿಯಾಗುವ ಅವಕಾಶ ಜಿನ್ನಾಗೆ ಸಿಕ್ಕಿದ್ದರೆ ಭಾರತ ವಿಭಜನೆ ಆಗುತ್ತಿರಲಿಲ್ಲ ಎಂದು ಖಾನ್ ಹೇಳಿದರು.

ಭಾರತ ವಿಭಜನೆಗೆ ನೆಹರು ಮತ್ತು ಗಾಂಧಿ ಪರೋಕ್ಷ ಕಾರಣಿಕರ್ತರು. ನೆಹರು ಅವರನ್ನು ಕಂಡರೆ ಗಾಂಧೀಜಿಗೆ ಪಂಚಪ್ರಾಣ. ಗಾಂಧಿ ಸ್ವಲ್ಪ ದೂರದೃಷ್ಟಿಯಿಂದ ಯೋಚಿಸಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ ಎಂದರು. ಜಿನ್ನಾ ಭಾರತಕ್ಕೆ ಯಾವತ್ತೂ ಶತ್ರುವಾಗಿ ಕಾಡಿದ್ದಾರೆ. ತನ್ನ ಸ್ವಾರ್ಥಕ್ಕಾಗಿ ದೇಶ ವಿಭಜನೆಗೆ ಕೈಹಾಕಿದರೆ ಹೊರತು ಮುಸ್ಲಿಮರ ಶ್ರೇಯಸ್ಸಿನ ಉದ್ದೇಶ ಇರಲೇ ಇಲ್ಲ ಎಂದು ಖಾನ್ ಹೇಳಿದರು.

ಜಿನ್ನಾ ಸಂಪ್ರದಾಯಸ್ಥನಲ್ಲ. ಮುಸ್ಲಿಮನಾಗಿ ಎಂದಿಗೂ ಬದುಕಲಿಲ್ಲ. ಸದಾ ಮದ್ಯಪಾನ ಮಾಡುತ್ತಿದ್ದರು. ಜಿನ್ನಾ ಪಾರ್ಸಿ ಯುವತಿಯನ್ನು ಮದುವೆಯಾದರು. ಅದೂ ಸ್ನೇಹಿತ ಮಗಳನ್ನೇ. ಆದರೆ ವಿಪರ್ಯಾಸ ಸಂಗತಿಯೆಂದರೆ, ಜಿನ್ನಾ ಮಗಳು ಕೂಡಾ ಪಾರ್ಸಿ ಯುವಕನೊಬ್ಬನ ಜೊತೆ ವಿವಾಹ ಮಾಡುವಂತೆ ತಂದೆಯನ್ನು ಕೇಳಿಕೊಂಡಳು. ಇದಕ್ಕೆ ತಂದೆ ಸಮ್ಮತಿಸಿಲಿಲ್ಲ. ಇದರಿಂದ ತಂದೆ ಮಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಮಗಳು ಬೇರೆಯಾದಳು. ಅಂತಿಮವಾಗಿ ಜಿನ್ನಾ ಕಳೇಬರವನ್ನು ಮೋಡಲು ಮಗಳು ಮುಂಬೈನಿಂದ ಪಾಕ್ ಗೆ ಅವರ ತೆರಳಿದ್ದಳು. ಇವೆಲ್ಲವೂ ಜಿನ್ನಾ ಸ್ವಾರ್ಥವನ್ನು ಎತ್ತಿ ತೋರಿಸುತ್ತವೆ ಎಂದು ಖಾನ್ ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X