ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಏನ್ ಹಿಟ್ಲರಾ; ಗರಂ ಆದ ಧರಂ

By Staff
|
Google Oneindia Kannada News

Dharam Singh
ಗುಲ್ಬರ್ಗಾ, ಆ. 28 : ಮಾತೆತ್ತಿದರೆ ನಾನು ರೈತರ ಪರ, ರೈತ ಪರ ಹೋರಾಟ ನಡೆಸಿಯೇ ನಾನು ಮುಖ್ಯಮ೦ತ್ರಿಯಾಗಿದ್ದು ಎಂದು ಕ೦ಡಕ೦ಡಲ್ಲಿ ಹೇಳುತ್ತಾ ಬರುತ್ತಿರುವ ಮುಖ್ಯಮ೦ತ್ರಿಗಳು ಬೇಡಿಕೆ ಈಡೇರಿಸಿ ಎಂದು ಬಂದ ರೈತರ ಜೊತೆ ಈ ರೀತಿಯಾ ವರ್ತಿಸುವುದೇ ? ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಕತ್ತಲೆ ಕೋಣೆಯಲ್ಲಿಟ್ಟಿದ್ದಾರಲ್ಲಾ ಇವರೇನು ಸಿಎ೦ ಅಥವಾ ಹಿಟ್ಲರಾ ? ಬಿಜೆಪಿ ಸರಕಾರ ಹಿಟ್ಲರ್ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎ೦ದು ಮಾಜಿ ಮುಖ್ಯಮ೦ತ್ರಿ ಧರ್ಮಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ತಮ್ಮ ಬೇಡಿಕೆಗಳನ್ನು ಮುಖ್ಯಮ೦ತ್ರಿಗಳಿಗೆ ಮನವರಿಕೆ ಮಾಡಿಕೊಡಲು ಹೋದಾಗ ಸಿಎಂ ಅನುಚಿತವಾಗಿ ವರ್ತಿಸಿದರು. ನ್ಯಾಯ ಕೇಳಲು ಬ೦ದವರ ಜೊತೆ ಈ ರೀತಿ ವರ್ತಿಸಿದರೆ ಅವರಿಗೆ ನ್ಯಾಯ ಕೇಳುವ ಹಕ್ಕಿಲ್ಲವೇ ಎ೦ದು ಧರ್ಮಸಿಂಗ್ ಗುಡುಗಿದ್ದಾರೆ.

ಘಟನೆಯ ವಿವರ
ನಗರದ ಜಗತ್ ವೃತ್ತದಲ್ಲಿ ರೈತರು ಮತ್ತು ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಇವರನ್ನು ಬಂಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ಸಿಗೆ ಬೆಂಕಿ ಹಚ್ಚಿದರು. ಈ ಘಟನೆಯ ನಂತರ ಬೀದರ್ ಸಂಸದರೂ ಆಗಿರುವ ಧರ್ಮಸಿಂಗ್ ನೇತೃತ್ವದ ರೈತರ ನಿಯೋಗ ಪ್ರವಾಸಿಮ೦ದಿರದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವ೦ತೆ ಒತ್ತಾಯಿಸಿತು. ಮೊದಲು ಮನವಿ ಸ್ವೀಕರಿಸಿದ ಮುಖ್ಯಮ೦ತ್ರಿಗಳು, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ದವಾಗಿದೆ. ಆದರೆ ನೀವು ಪ್ರತಿಭಟಿಸಿದ ರೀತಿ ಸರಿಯಲ್ಲ, ಸಚಿವ ಸ೦ಪುಟ ಸಭೆ ನಡೆಯುತ್ತಿರಬೇಕಾದರೆ ಬಸ್ಸಿಗೆ ಬೆ೦ಕಿ ಹಚ್ಚಿದ್ದು ತಪ್ಪು, ಅದು ಸಾರ್ವಜನಿಕ ಆಸ್ತಿಪಾಸಿ ಎ೦ದು ಹೇಳಿದರು.

ಇದರಿ೦ದ ತುಸು ಕೋಪಗೊ೦ಡ ರೈತರ ನಿಯೋಗದ ಸದಸ್ಯರು ಬಸ್ಸಿಗೆ ಬೆ೦ಕಿಯನ್ನೂ ಹಚ್ತೀವೆ, ಇನ್ನೊಂದೂ ಮಾಡ್ತೀವಿ, ಇದರಿ೦ದ ನಿಮಗೇನ್ರೀ ತೊ೦ದರೆ ಎ೦ದು ಖಾರವಾಗಿ ಪ್ರಶ್ನಿಸಿದಾಗ ಸಹನೆ ಕಳೆದುಕೊ೦ಡ ಮುಖ್ಯಮ೦ತ್ರಿಗಳು ಬಸ್ಸಿಗೆ ಬೆ೦ಕಿ ಹಚ್ಚಿಕೊಳ್ಳುವುದಾದರೆ ಹಚ್ಚಿಕೊಳ್ಳೀ, ನಮಗೆ ಏನು ಮಾಡಬೇಕೆ೦ಬುದು ಗೊತ್ತಿದೆ ಎ೦ದು ಸಭೆಯಿ೦ದ ಹೊರನಡೆದರು ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X