ಕ್ವಾರ್ಟರ್ ಫೈನಲ್ ತಲುಪಿದ ಸೈನಾ
ಹೈದರಾಬಾದ್,
ಆ. 14 : ಗೆಲುವಿನ ನಾಗಾಲೋಟದಲ್ಲಿ ಮುಗ್ಗುತ್ತಿರುವ ಭಾರತದ ಬಹುನಿರೀಕ್ಷಿತ ಬ್ಯಾಡ್ಮಿಂಟನ್ ಕ್ರೀಡಾಪಟು ಸೈನಾ ನೆಹ್ವಾಲ್ ನಿರೀಕ್ಷೆಯಂತೆ ಬಲ್ಗೇರಿಯಾದ 10 ಕ್ರಮಾಂಕದ ಪೇಟಿ ನೆಡಲ್ ಚೀವಾ ಅವರನ್ನು 18-21, 21-18, 21-10 ರಿಂದ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ತಲುಪಿದರು. id="toptextpromo">ಆರಂಭಿಕ
ಸುತ್ತಿನ್ನು ಕಳೆದಕೊಂಡ 19ರ ಹರೆಯದ ಸೈನಾ ಎರಡು ಮತ್ತು ಮೂರನೇ ಸುತ್ತಿನಲ್ಲಿ ಬಲ್ಗೇರಿಯಾ ಆಟಗಾರ್ತಿ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಸುಮಾರು 57 ನಿಮಿಷ ನಡೆದ ಹಣಾಹಣಿಯಲ್ಲಿ ಬಲ್ಗೇರಿಯಾದ ನೆಡಲ್ ಚೀವಾ ಅವರನ್ನು ಸೋಲಿಸಿ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications