ಬೆಂಗಳೂರಿನಲ್ಲಿ ತಡರಾತ್ರಿ ಭೂಕಂಪನ
ಬೆಂಗಳೂರು, ಆ. 11 : ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಯಲಹಂಕದ ಅಲ್ಲಾಳಸಂದ್ರದಲ್ಲಿ ಲಘು ಭೂಕಂಪವಾದ ಬಗ್ಗೆ ವರದಿಯಾಗಿದೆ. ತಡರಾತ್ರಿ 2 ಗಂಟೆ (ಆ 11) ಸುಮಾರಿಗೆ ಸ್ಥಳೀಯರಿಗೆ ಇದರ ಅನುಭವವಾಗಿದ್ದು, ಭಯಭೀತರಾಗಿ ಮನೆಯಿಂದ ಹೊರಬಂದು ಸಮೀಪದ ಪೋಲಿಸ್ ಠಾಣೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಹಿಂದೂ ಮಹಾಸಾಗರದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.6ರಷ್ಟು ವರದಿಯಾಗಿದೆ. ಚೆನ್ನೈ ಮತ್ತು ಭುವನೇಶ್ವರದಲ್ಲೂ ಲಘು ಭೂಕಂಪವಾಗಿದೆ. ಮೈನ್ಮಾರ್, ಥೈಲ್ಯಾಂಡ್, ಬಾಂಗ್ಲಾದೇಶ ಮತ್ತು ಇಂಡೊನೇಷಿಯಾದಲ್ಲೂ ಭೂಕಂಪ ಸಂಭವಿಸಿದ ವರದಿಯಾಗಿದ್ದು, ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
(ಏಜನ್ಸೀಸ್)












Click it and Unblock the Notifications