ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೂಲಿ ಕಿರೀಟಕ್ಕೆ ಇನ್ನೊಂದು ಪುಕ್ಕ

By Staff
|
Google Oneindia Kannada News

Sourav Ganguly
ಬೆಂಗಳೂರು, ಜು. 16: ಗುಂಡೆದೆಯ ಗಂಡು ಸೌರವ್ ಗಂಗೂಲಿಯ ಟೊಪ್ಪಿಗೆಗೆ ಇನ್ನೊಂದು ಪುಕ್ಕ. ಹೌದು, ವಿದೇಶದ ವಿಶ್ವವಿದ್ಯಾನಿಲಯವೊಂದು ಅವರಿಗೆ ಗೌರವ ಫೆಲೋಷಿಪ್ ನೀಡಿ ಗೌರವಿಸಿದೆ. ಬ್ರಿಟನ್ನಿನ ಲಂಕಾಶೈರ್ ಕೇಂದ್ರೀಯ ವಿಶ್ವವಿದ್ಯಾಯಲಯ ಗಂಗೂಲಿಗೆ ಫೆಲೋಫಿಪ್ ಪ್ರಕಟಿಸಿ ತಿಂಗಳುಗಳೇ ಕಳೆದಿತ್ತು. ಜುಲೈ 15ರ ಬುಧವಾರ ಗಂಗೂಲಿ ಇಂಗ್ಲೆಂಡಿಗೆ ತೆರಳಿ ಖದ್ದಾಗಿ ಗೌರವ ಪುರಸ್ಕಾರವನ್ನು ಸ್ವೀಕರಿಸಿದರು.

"ಸರಿಸಾಟಿಯಿಲ್ಲದ ಬದ್ಧತೆ, ಪ್ರತಿಭೆ ಮತ್ತು ಛಲ" ಪ್ರದರ್ಶಿಸಿರುವ ಗಂಗೂಲಿಗೆ ಈ ಗೌರವ ಸಲ್ಲುತ್ತದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರಾಗಿ, ನಂತರ ನಾಯಕರಾಗಿ ನಂತರ ತಂಡದಿಂದ ಹೊರಗುಳಿದು ಮತ್ತೆ ತಂಡಕ್ಕೆ ಮರಳಿ ಛಲಬಿಡದ ತ್ರಿವಿಕ್ರಮನಂತೆ ಆಕರ್ಷಕ, ಆಕ್ರಮಣಕಾರಿ ಆಟ ಪ್ರದರ್ಶಿಸಿರುವ ಅವರು 113 ಟೆಸ್ಟ್ ಪಂದ್ಯ, 311 ಏಕದೀವಸೀಯ ಪಂದ್ಯಗಳನ್ನು ಆಡಿ ಕಳೆದವರ್ಷವಷ್ಟೆ ನಿವೃತ್ತಿ ಪ್ರಕಟಿಸಿದ್ದಾರೆ. 113 ತಿರುವುಮುರುವಾದರೆ ಏನಾಗುತ್ತದೆ!

"ನನಗೆ ಸಂದ ಅದ್ಭುತ ಗೌರವವಿದು" ಎಂದು ಫೆಲೋಫಿಪ್ ಸ್ವೀಕರಿಸಿ ಗಂಗೂಲಿ ನುಡಿದರು ಎಂದು ಲಂಕಾಶೈರ್ ಈವನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.13 ವರ್ಷಗಳ ಹಿಂದೆ ನನ್ನ ಮೊದಲ ಏಕದಿವಸೀಯ ಪಂದ್ಯವನ್ನು ಓಲ್ಡ್ ಟ್ರಾಫೋರ್ಡ್ ನಲ್ಲಿ ಆಡಿದ್ದೆ. ಲಂಕಾಶೈರ್ ಕ್ರಿಕೆಟ್ ಕ್ಲಬ್ಬಿನಲ್ಲೂ ಆಡಿದ ನೆನಪು ಸ್ಮರಣೀಯ ಎಂದು ಸೌರವ್ ಸಂತಸಪಟ್ಟರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X