ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸುಳೆ ಮೇಲೆ ಅತ್ಯಾಚಾರವೆಸಗಿ ಕೊಲೆ

By Staff
|
Google Oneindia Kannada News

ಅಮರಾವತಿ, ಜು. 10 : ಹದಿನೆಂಟು ತಿಂಗಳ ಹಸುಳೆಯ ಮೇಲೆ ಅತ್ಯಾಚಾರವೆಸಗಿ ನಂತರ ಕೊಂದು ಮಗುವಿನ ಶವವನ್ನು ಬಾವಿಗೆ ಎಸೆದ ಅಮಾನವೀಯ ಘಟನೆ ವರದಿಯಾಗಿದೆ. ಈ ಪಾತಕಿಯ ಹೆಸರು ಸಂಜಯ್ ಗಜಾಬೆ. ಪೊಲೀಸರು ಈತನನ್ನು ತಕ್ಷಣವೇ ಬಂಧಿಸಿದ್ದಾರೆ.

ಇಲ್ಲಿಂದ ಎಂಟು ಕಿ.ಮೀ ದೂರದ ಮೋರ್ಷಿ ಎನ್ನುವ ಹಳ್ಳಿಯಲ್ಲಿ ಈ ಘಟನೆ ವರದಿಯಾಗಿದೆ. ಮಗುವಿನ ತಂದೆ ಖಾಸಗಿ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತದರು. ತಡರಾತ್ರಿ ಮನೆ ಪ್ರವೇಶಿಸಿದ ಪಾತಕಿ ಸಂಜಯ್ ಮಗುವನ್ನು ಕದ್ದು ಪಕ್ಕದ ಫಾರಂಹೌಸ್ ಒಂದರಲ್ಲಿ ಅತ್ಯಾಚಾರವೆಸಗಿ ಮಗುವನ್ನು ಕೊಂದು ಬಾವಿಗೆ ಎಸೆದಿದ್ದಾನೆ. ಮನೆಯವರು ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಅದರ ಶವ ಬಾವಿಯಲ್ಲಿ ತೇಲುತ್ತಿತ್ತು. ತಕ್ಷಣವೇ ಪೊಲೀಸರಿಗೆ ಮನೆಯವರು ಈ ವಿಷಯ ತಿಳಿಸಿದರು ಎಂದು ತಿಳಿದು ಬಂದಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X