ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಜರ್ ಫೆಡರರ್ ವಿಶ್ವದಾಖಲೆ

By Staff
|
Google Oneindia Kannada News

Roger Federer wins sixth Wimbledon title
ಲಂಡನ್, ಜು. 6 : ಅಮೆರಿಕದ ಆಂಡಿ ರಾಡಿಕ್ ಒಡ್ಡಿದ ಕಠಿಣ ಸವಾಲುಗಳನ್ನು ಚಾಣಾಕ್ಷತನದಿಂದ ಮೆಟ್ಟಿನಿಂತ ಸ್ವಿಜರ್ ಲ್ಯಾಂಡಿನ ರೋಜರ್ ಫೆಡರರ್ ಭಾನುವಾರ ಜಾಗತಿಕ ಟೆನಿಸ್ ನಲ್ಲಿ ಹೊಸ ಅಧ್ಯಾಯವನ್ನು ಬರೆದರು. ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದ ಫೆಡರರ್ ಅತಿಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಕೊಂಡ ಏಕೈಕ ಎಂಬ ಭಾಜನಕ್ಕೆ ಪಾತ್ರರಾದರು.

ಇದು ರೋಡರ್ ಫೆಡರರ್ ಗೆ ಒಲಿಯುತ್ತಿರುವ 15ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಅಮೆರಿಕದ ಪೀಟ್ ಸಾಂಪ್ರಾಸ್ ಹೆಸರಿನಲ್ಲಿದ್ದ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ದಾಖಲೆಯನ್ನು ಮುರಿದರು. ಆಲ್ ಇಂಗ್ಲೆಂಡ್ ಸೆಂಟರ್ ಕೋರ್ಟ್ ನಲ್ಲಿ ರೋಚಕ ಫೈನಲ್ ಹಣಾಹಣಿಯಲ್ಲಿ ಫೆಡರರ್ 5-7, 7-6, 7-6, 3-6, 16-15 ರಲ್ಲಿ ರಾಡಿಕ್ ಅವರನ್ನು ಸೋಲಿಸಿದರು.

27ರ ಹರೆಯದ ಫೆಡರರ್ ಗೆ ಒಲಿಯುತ್ತಿರುವ ಆರನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ. ಮೂರು ಆಸ್ಟ್ರೇಲಿಯನ್ ಒಪನ್, ಐದು ಅಮೆರಿಕನ್ ಒಪನ್, ಮತ್ತು ಒಂದು ಫ್ರೆಂಚ್ ಒಪನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಾಲ್ಕು ಗಂಟೆ 16 ನಿಮಿಷಗಳ ಹೋರಾಟದ ಬಳಿಕ ಗೆಲುವು ಸಾಧಿಸುತ್ತಿದ್ದಂತೆಯೇ ಫೆಡರರ್ ಅಂಗಳದಲ್ಲಿ ಸಂಭ್ರಮದಿಂದ ಕುಣಿದಾಡಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X