ಇಂಡೋನೇಷಿಯಾ ಸೂಪರ್ ಸಿರೀಸ್ ಗೆದ್ದ ಸೈನಾ

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೈನಾ ಅವರು 12-21, 21-18, 21-8 ರಲ್ಲಿ ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ ಚೀನಾದ ಲಿನ್ ವಾಂಗ್ ಅವರನ್ನು ಸೋಲಿಸಿದರು. ಈ ಮೂಲಕ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಪ್ರತಿಕ್ರಿಯೆ ನೀಡಿದ ಸೈನಾ, ನನ್ನ ಕನಸು ನನಸಾಗಿದೆ. ಇದ್ದಕ್ಕಿಂತ ದೊಡ್ಡ ಕ್ಷಣ ನನಗೆ ಸಿಕ್ಕಿರಲಿಲ್ಲ.
ಸೂಪರ್ ಸರಣಿ ಗೆಲ್ಲಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ಆದರೆ, ಇಷ್ಟು ಸಣ್ಣ ವಯಸ್ಸಿನಲ್ಲಿ ಈ ಸಾಧನೆ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು 19 ಹರೆಯದ ಸೈನಾ ಸಂಭ್ರಮದಿಂದ ಹೇಳಿದರು. ವಿಶ್ವದ ಎಂಟನೇ ಕ್ರಮಾಂಕದ ಸೈನಾ ಅವರ ಸಾಧನೆ ಪ್ರಶಂಸಿಸಿರುವ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಎರಡು ಲಕ್ಷ ರುಪಾಯಿ ನಗದು ಬಹುಮಾನ ಘೋಷಿಸಿದೆ.
(ಏಜನ್ಸೀಸ್)












Click it and Unblock the Notifications