ಬಂಗಾರಪೇಟೆ-ಬೆಂಗಳೂರು ಬಸ್ ಪಾಸ್ ವ್ಯವಸ್ಥೆ
ಕೋಲಾರ, ಜೂ. 16 : ಕರ್ನಾಟರ ರಾಜ್ಯ ರಸ್ತೆ ಸಾರಿಗೆ ನಿಗಮವು ಗ್ರಾಮಾಂತರ ಹಾಗೂ ನಗರ ಸಾರಿಗೆ ಸಂಯುಕ್ತ ಸೇವೆಯ ಯೋಜನೆಯನ್ನು ಕೋಲಾರ ಹಾಗೂ ಮಾಲೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ದೈನಿಕ ಪಾಸಿನ ಸೌಲಭ್ಯವನ್ನು ಈಗಾಗಲೇ ನೀಡಿದ್ದು, ಈ ಸೌಲಭ್ಯವನ್ನು ಬಂಗಾರಪೇಟೆಯಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೂ ಸಹ ಜೂನ್ 15 ರಿಂದ ಜಾರಿ ತಂದಿದೆ.
ಬಂಗಾರಪೇಟೆಯಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರು ಹೋಗಿ ಬರುವ ಪ್ರಯಾಣದರದಷ್ಟು ಮುಖಬೆಲೆಯ ದೈನಿಕ ಪಾಸನ್ನು ಖರೀದಿಸಿದಲ್ಲಿ ಆ ದಿನದಂದು ಬೆಂ.ಮ.ಸಾ.ಸಂಸ್ಥೆಯ ಕಪ್ಪು ಕೆಂಪು ಹಲಗೆಯ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಬಂಗಾರಪೇಟೆ-ಬೆಂಗಳೂರು ದೈನಿಕ ಪಾಸ್ ನ ಬೆಲೆ ರೂ.100, ಪಾಸುಗಳು ಬಂಗಾರಪೇಟೆ, ಕೆಜಿಎಫ್ ಬಸ್ ನಿಲ್ದಾಣಗಳಲ್ಲಿ ಹಾಗೂ ಬಂಗಾರಪೇಟೆಯಿಂದ ಬೆಂಗಳೂರು ಕಡೆಗೆ ಕಾರ್ಯಾಚರಣೆ ಆಗುವ ಬಸ್‌ಗಳ ನಿರ್ವಾಹಕರ ಬಳಿ ದೊರೆಯುತ್ತದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications