ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಜೊತೆಗೆ ಮಾತುಕತೆ ಇಲ್ಲ, ಕೃಷ್ಣ

By No dialogue till Pak acts credibly against terror: Krishna
|
Google Oneindia Kannada News

SM Krishna
ನವದೆಹಲಿ, ಜೂ. 5 : ಮುಂಬೈದಾಳಿಯ ಪ್ರಮುಖ ಆರೋಪಿ ಸಯೀದ್‌ ಹಫೀಜ್ ನನ್ನು ಬಿಡುಗಡೆ ಮಾಡಿರುವುದು ಉಪಖಂಡದಲ್ಲಿ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ. ಭಾರತದ ವಿರುದ್ದ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ವಿರುದ್ಧ ಪಾಕಿಸ್ತಾನವು ವಿಶ್ವಾಸಾರ್ಹ ಕ್ರಮ ಕೈಗೊ೦ಡ ನಂತರ ಇಸ್ಲಾಮಾಬಾದ್ ಜತೆಗೆ ಮಾತುಕತೆಗೆ ನವದೆಹಲಿ ಸಿದ್ದ ಎಂದು ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಹೇಳಿದ್ದಾರೆ.

ಮಾತುಕತೆ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಪಾಕಿಸ್ತಾನ ಪ್ರಕಟಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕ್ ಉಗ್ರರರನ್ನು ಮಟ್ಟ ಹಾಕುವ ದೃಢ ಕ್ರಮ ಕೈಗೊಳ್ಳುವವರೆಗೆ ನಾವು ಅವರ ಜೊತೆ ಮಾತುಕತೆಗೆ ಸಿದ್ದವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾತುಕತೆಯ ಮೂಲಕ ಎರಡೂ ರಾಷ್ಟ್ರಗಳು ಸಮಸ್ಯೆಯನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಈ ಭಾಗದಲ್ಲಿ ಶಾಶ್ವತ ಶಾಂತಿ ಕಾಪಾಡಿಕೊಂಡು ಬರಬಹುದು ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಅಬ್ದುಲ್ ಬಶೀರ್ ಈ ಹಿಂದೆ ಹೇಳಿಕೆ ನೀಡಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X