ಟ್ರಾಫಿಕ್ ಪೊಲೀಸರ ಕೈಯಲ್ಲಿ ಹೈಟೆಕ್ ಇಂಟರ್‌ಸೆಪ್ಟರ್!
ಶಿವಮೊಗ್ಗ,
ಜೂ. 4 : ವೇಗವಾಗಿ ವಾಹನ ಓಡಿಸುವವರ, ಸಿಗ್ನಲ್ ಜಂಪ್ ಮಾಡುವವರ, ಕುಡಿದು ವಾಹನ ಓಡಿಸುವವರ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸುವವರನ್ನು ಸುಲಭವಾಗಿ ಗುರುತಿಸಿ ಕೇಸು ದಾಖಲಿಸಲು ರಾಜ್ಯ ಸರಕಾರ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಇಂಟರ್‌ಸೆಪ್ಟೆರ್ ವಾಹನ ಜಿಲ್ಲಾ ಪೊಲೀಸರಿಗೆ ನೀಡಿದೆ. id="toptextpromo">ಸಂಚಾರಿ
ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಂದು ಸಂಜಾರಿ ಪೊಲೀಸರು ನಗರದ ಬಸವೇಶ್ವರ ವೃತ್ತದಲ್ಲಿ ಇಂಟರ್‌ಸೆಪ್ಟೆರ್ ವಾಹನದ ಸಹಾಯದಿಂದ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಹಿಡಿದು ಪ್ರಕರಣ ದಾಖಲಿಸಿದರು. id='are-slot-1' class='oiad oi-axt oiadv'> id='top-searched-articles'>ವಾಹನ
ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಇಂಟರ್‌ಸೆಪ್ಟರ್ ವಾಹನದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಕ್ಯಾಮರಾ ಹಾಗೂ ಕಂಪ್ಯೂಟರ್ ಸಹಾಯದಿಂದ ನಿಯಮಗಳ ಉಲ್ಲಂಘನೆಯನ್ನು ಗುರುತಿಸಬಹುದಾಗಿದೆ. ರಾಜ್ಯ ಸರ್ಕಾರವು ಈ ವಾಹನವನ್ನು 15 ಲಕ್ಷ ರೂ.ನೀಡಿ ಖರೀದಿಸಿದ್ದು, ಇಂತಹ ವಾಹನವನ್ನು ಪ್ರತಿ ಜಿಲ್ಲೆಗೊಂದರಂತೆ ಸಂಚಾರಿ ಪೊಲೀಸ್ ಠಾಣೆಗಳಿಗೆ ನೀಡಲಾಗಿದೆ.











Click it and Unblock the Notifications