ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಸ್ಪೀಕರ್ ಆಗಿ ಮೀರಾ ಅವಿರೋಧ ಆಯ್ಕೆ

By Staff
|
Google Oneindia Kannada News

Meira Kumar elected LS Speaker, scripts history
ನವದೆಹಲಿ, ಜೂ.3: ಲೋಕಸಭೆ ಸ್ಪೀಕರ್ ಆಗಿ ಮಾಜಿ ಕೇಂದ್ರ ಸಚಿವೆ ಮೀರಾ ಕುಮಾರ್ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಹುದ್ದೆಗೆ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಸ್ಪೀಕರ್ ಹುದ್ದೆಗೆ ಮತ್ತಿನ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವರು ಅವರ ಆಯ್ಕೆ ಸುಲಭಸಾಧ್ಯವಾಗಿದೆ.

ಪ್ರಧಾನಿ ಮನಮೋಹನ್ ಸಿಂಗ್, ವಿರೋಧ ಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಮೀರಾ ಅವರನ್ನು ಸ್ವಾಗತಿಸಿದರು. ಮೀರಾ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರೊಂದಿಗೆ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಸಚಿವರಾದ ಪ್ರಣಬ್ ಮುಖರ್ಜಿ ಮತ್ತಿತರು ಶುಭ ಕೋರಿದ್ದಾರೆ.

64 ವರ್ಷದ ಮೀರಾಕುಮಾರ್ ಅವರು ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ ಪುತ್ರಿ ಎಂಬುದು ವಿಶೇಷ. ಲೋಕಸಭೆಯ ಪ್ರಥಮ ದಲಿತ ಮಹಿಳಾ ಸ್ಪೀಕರ್ ಎಂಬ ಪಾತ್ರಕ್ಕೆ ಮೀರಾ ಕುಮಾರ್ ಇಂದು ಭಾಜನರಾದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X