ಲಾಭಾಂಶದೊಂದಿಗೆ ಬಿಎಸ್ ಇ ಸೆನ್ಸೆಕ್ಸ್ ಆರಂಭ
ಮುಂಬೈ, ಜೂ.1: ಮುಂಬೈ ಷೇರು ಮಾರುಕಟ್ಟೆ ಸೋಮವಾರ ಲಾಭಾಂಶದೊಂದಿಗೆ ಪ್ರಾರಂಭವಾಯಿತು. ಒಮ್ಮೆಲೆ 250 ಪಾಯಿಂಟ್ ಗಳಷ್ಟು ಏರಿಕೆ ಕಂಡ ಸೂಚ್ಯಂಕ 14897 ಪಾಯಿಂಟ್ ಗಳ ಬಳಿ ಬಂದು ನಿಂತಿತು.
ನಿಫ್ಟಿ ಸಹ 84 ಪಾಯಿಂಟ್ ಗಳ ಹೆಚ್ಚಳದಿಂದ 4533 ಕ್ಕೆ ತಲುಪಿತು. ಇದರೊಂದಿಗೆ ಷೇರು ಮಾರುಕಟ್ಟೆ ಒಂಬತ್ತು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತು. ಡಿಎಲ್ ಎಫ್, ಟಾಟಾ ಸ್ಟೀಲ್ ಮತ್ತು ಎಸಿಸಿ ತಲಾ ಶೇ.3ರಷ್ಟು ಲಾಭದೊಂದಿಗೆ ಮುಂದಿವೆ.
ಚೀನಾದ ಶಾಂಘೈ ಷೇರುಪೇಟೆ, ಹಾಂಗ್ ಕಾಂಗ್ ಮತ್ತು ಜಪಾನ್ ಷೇರುಪೇಟೆಗಳು ತಲಾ ಶೇ1.7ರಷ್ಟು ಏರಿಕೆ ಕಂಡಿವೆ. ಬಿಎಸ್ ಇ ಶೇ.1.9ರಷ್ಟು ಏರಿಕೆ ಕಂಡಿದ್ದು ಏಷ್ಯಾದಲ್ಲೇ ಅತ್ಯಧಿಕ ಪಾಯಿಂಟ್ ಗಳೊಂದಿಗೆ ಮುಂದಿದೆ.
(ಏಜೆನ್ಸೀಸ್)












Click it and Unblock the Notifications