ಕುಂಟಿಕಾನ ಫ್ಲೈಓವರ್ ಶೀಘ್ರ ಸಂಚಾರಕ್ಕೆ ಮುಕ್ತ
ಮಂಗಳೂರು, ಮೇ. 27 : ಬೆಳೆಯುತ್ತಿರುವ ಮಂಗಳೂರು ಮಹಾನಗರದ ಮೊದಲ ಫ್ಲೈಒವರ್ ರಾಷ್ಟ್ರೀಯ ಹೆದ್ದಾರಿ 17 ಮತ್ತು ಬಿಜೈ ವಿಮಾನ ನಿಲ್ದಾಣ ರಸ್ತೆಗಳು ಸೇರುವ ಕುಂಟಿಕಾನ ಜಂಕ್ಷನ್ ನಲ್ಲಿ ನಿರ್ಮಾಣದ ಹಂತದಲ್ಲಿರುವ ಫ್ಲೈಒವರ್ ಇನ್ನು 15 ದಿನದೊಳಗೆ ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಇದರಿ೦ದ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಸುಗಮವಾದ ವಾಹನ ಸಂಚಾರ ಸಾಧ್ಯವಾಗಬಹುದು. ಅಲ್ಲದೇ ದೇರೆಬೈಲು - ಕಾವೂರು ಕಡೆಗೆ ಸಂಚರಿಸುವ ಸಿಟಿ ಬಸ್ ಮತ್ತು ಇತರ ವಾಹನಗಳ ಸಂಚಾರಗಳು ಕೂಡಾ ನಿರಾತಂಕವಾಗಿ ಸಾಗಬಹುದು. ಕೊಟ್ಟಾರ ಜಂಕ್ಷನ್ ನಲ್ಲಿ ಫ್ಲೈಒವರ್ ನಿರ್ಮಾಣ ಕಾಮಗಾರಿ ಚುರುಕುಗೊಂಡಿದೆ. ಆದರೆ ರಾಷ್ಟ್ರೀಯ ಹೆದ್ದಾರಿ 48 ಬಿ ಸಿ ರೋಡ್ ನಲ್ಲಿ ನಡೆಯುತ್ತಿರುವ ಫ್ಲೈಒವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿರುವುದು ದೈನಂದಿನ ಸಮಸ್ಯೆಯಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications