ಪೆಟ್ರೋಲ್ ಬೆಲೆ 2 ರುಪಾಯಿ ಏರಿಕೆ ?
ನವದೆಹಲಿ, ಮೇ. 21 : ಚುನಾವಣೆಗೂ ಮುನ್ನ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದ್ದ ಯುಪಿಎ ಸರಕಾರ ಇದೀಗ ಇನ್ನೊಂದು ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಒದಗಿರುವ ಬೆನ್ನಲ್ಲೇ ಅವುಗಳ ಬೆಲೆ ಏರಿಕೆಗೆ ಚಿಂತನೆ ನಡೆಸಿದೆ.
ಸರಕಾರದ ಹಿಡಿತದಿಂದ ಕೈಬಿಟ್ಟು ತೈಲ ಕಂಪನಿಗಳ ಸುಪರ್ದಿಗೆ ಒಪ್ಪಿಸುವ ಪ್ರಸ್ತಾವಕ್ಕೆ ಸರಕಾರ ಒಪ್ಪಿಗೆ ನೀಡಿದರೆ ಪೆಟ್ರೋಲ್ ಬೆಲೆ ಲೀಟರ್ ಗೆ 2 ರುಪಾಯಿ, ಹಾಗೂ ಡಿಸೇಲ್ ಬೆಲೆ ಲೀಟರ್ ಗೆ 30 ಪೈಸೆಯಷ್ಟು ಏರಿಕೆಯಾಗಲಿದೆ. ತೈಲ ಬೆಲೆಗಳ ಮೇಲಿನ ನಿಯಂತ್ರಣವನ್ನು ಸರಕಾರದಿಂದ ಮುಕ್ತಗೊಳಿಸುವ ಪ್ರಸ್ತಾವವೊಂದನ್ನು ಈಗಾಗಲೇ ಪೆಟ್ರೋಲಿಯಂ ಸಚಿವಾಲಯ ಸಿದ್ಧಪಡಿಸಿಕೊಂಡಿದೆ. ಅದಕ್ಕೆ ನೂತನ ಪೆಟ್ರೋಲಿಯಂ ಸಚಿವರು ಒಪ್ಪಿಗೆ ನೀಡಿದರೆ ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತದೆ. ಅಲ್ಲೂ ಒಪ್ಪಿಗೆ ದೊರೆತರೆ ಮುಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳೂ ಏರಿಳಿಯುತ್ತಿವೆ, ಸದ್ಯಕ್ಕೆ ಪೆಟ್ರೋಲ್ ಗೆ 2 , ಡಿಸೇಲ್ ಗೆ 30 ಪೈಸೆಯಷ್ಟು ಬೆಲೆ ಏರಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
(ಏಜನ್ಸೀಸ್)












Click it and Unblock the Notifications