ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಭಾರೀ ಏರಿಕೆ
ಮುಂಬೈ, ಮೇ. 18 : ಲೋಕಸಭೆ ಚುನಾವಣೆಯಲ್ಲಿ ಯುಪಿಎ ಅತಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಕೇಂದ್ರದಲ್ಲಿ ಸುಭದ್ರ ಹಾಗೂ ಪ್ರಗತಿಪರ ಸರಕಾರ ರಚನೆಯ ಕಸರತ್ತು ನಡೆಸಿರುವ ಮಧ್ಯೆದಲ್ಲೇ ಇತ್ತ ಮುಂಬೈ ಷೇರು ಮಾರುಕಟ್ಟೆ ಹಾಗೂ ನಿಫ್ಟಿ ಸೂಚ್ಯಂಕಗಳಲ್ಲಿ ಭಾರಿ ಏರಿಕೆ ಕಂಡಿದೆ.
ಇಂದು ಬೆಳಗ್ಗೆ ಆರಂಭದ ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ಸೆನ್ಸಕ್ಸ್ 30 ಷೇರುಗಳು ಕೆಲವೆ ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಅಂದರೆ 1,305, 97 (ಶೇ. 10.73) ಸೂಚ್ಯಂಕಗಳಷ್ಟು ಏರಿಕೆ ಕಂಡಿದೆ. ಅಲ್ಲದೇ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿಯ 50 ಷೇರುಗಳ ಸೂಚ್ಯಂಕ ಕೂಡಾ ಶೇ. 14.48 ಅಂದರೆ 4,271.40 ಎರಿಕೆ ಕಂಡಿದೆ. ಕಳೆದ ಅನೇಕ ದಿನಗಳ ನಂತರ ಷೇರು ಮಾರುಕಟ್ಟೆ ಭಾರಿ ಏರಿಕೆ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.
(ಏಜನ್ಸೀಸ್)












Click it and Unblock the Notifications