ಕಾಮೆಡ್ ಕೆ ಪರೀಕ್ಷೆಗೆ 65,258 ವಿದ್ಯಾರ್ಥಿಗಳು
ಬೆಂಗಳೂರು, ಮೇ.17: ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ಕಾಮೆಡ್-ಕೆ ಪರೀಕ್ಷೆ ಭಾನುವಾರ(ಮೇ 17) ಆರಂಭವಾಗಿದೆ. ಒಟ್ಟು 65,259 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಕಾಮೆಡ್ ಕೆ ಪರೀಕ್ಷೆ ತೆಗೆದುಕೊಂಡವರಲ್ಲಿ 15,049 ವಿದ್ಯಾರ್ಥಿಗಳು ಕರ್ನಾಟಕದವರು. 47,055 ವಿದ್ಯಾರ್ಥಿಗಳು ಮತ್ತು 18, 704 ವಿದ್ಯಾರ್ಥಿನಿಯರು ಪರೀಕ್ಷೆಗೆ ಕುಳಿತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 97 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
43, 924 ವಿದ್ಯಾರ್ಥಿಗಳು ಎಂಜಿನಿಯರಿಂಗ್, 14,869 ವಿದ್ಯಾರ್ಥಿಗಳು ವೈದ್ಯಕೀಯ /ದಂತವೈದ್ಯಕೀಯ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 611 ವೈದ್ಯಕೀಯ, 704 ದಂತವೈದ್ಯಕೀಯ ಮತ್ತು 11, 294 ಎಂಜಿನಿಯರಿಂಗ್ ಸೀಟುಗಳಿಗೆ ಈ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10ರಿಂದ12 ಗಂಟೆಯವರೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ. ಮಧ್ಯಾಹ್ನ 2ರಿಂದ 3 ಗಂಟೆವರೆಗೆ ಜೀವಶಾಸ್ತ್ರ. 3.30ರಿಂದ 4.30ರವರೆಗೆ ಗಣಿತ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications