ಆಂಧ್ರದಲ್ಲಿ ಖಾತೆ ತೆರೆದ ತೆಲುಗು ದೇಶಂ ಪಕ್ಷ
ಅದಿಲಾಬಾದ್, ಮೇ.16:ಅದಿಲಾಬಾದ್ ಜಿಲ್ಲೆಯ ಬೋಧ್ (ಮೀಸಲು) ಕ್ಷೇತ್ರದಿಂದ ತೆಲುಗು ದೇಶಂ ಪಕ್ಷ ಗೆಲ್ಲುವ ಮೂಲಕ ಮೊದಲ ಖಾತೆಯನ್ನು ತೆರೆದಿದೆ. ತೆಲುಗು ದೇಶಂ ಪಕ್ಷದ ಜಿ ನಗೇಶ್ ಅವರು ಅನಿಲ್ ಯಾದವ್ (ಕಾಂಗ್ರೆಸ್) ವಿರುದ್ಧ ಘನ ವಿಜಯ ಸಾಧಿಸಿದ್ದಾರೆ.
ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಕುಪ್ಪಂ ಕ್ಷೇತ್ರದಲ್ಲಿ10 ಸಾವಿರ ಮತಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸುಬ್ರಹ್ಮಣ್ಯಂ ರೆಡ್ಡಿ (ಕಾಂಗ್ರೆಸ್) ಅಭ್ಯರ್ಥಿ ವಿರುದ್ಧ ಚಂದ್ರಬಾಬು ನಾಯ್ಡು ಮುನ್ನಡೆಯಲ್ಲಿದ್ದಾರೆ.
(ಏಜೆನ್ಸೀಸ್)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications