ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಪಿಎ ಸರಕಾರ ರಚನೆ ಖಾತ್ರಿ

By Staff
|
Google Oneindia Kannada News

ನವದೆಹಲಿ, ಮೇ. 16 : 2009ರಲ್ಲಿ 15 ನೇ ಲೋಕಸಭೆಗೆ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದು, ಕಾಂಗ್ರಸ್ ನೇತೃತ್ವದ ಯುಪಿಎ ಸರಕಾರ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಮೂರೇಗೇಣಿದೆ. ದೇಶದಾದ್ಯಂತ ಕಾಂಗ್ರೆಸ್ ನೇತೃತ್ವದ ಯುಪಿಎ ಭರ್ಜರಿ ಜಯಗಳಿಸುತ್ತಾ ಸಾಗುತ್ತಿದ್ದು, ಇತ್ತೀಚೆಗೆ ಬಂದಿರುವ ವರದಿ ಪ್ರಕಾರ ಯುಪಿಎ 250 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ಕಾಂಗ್ರೆಸ್ ಪಕ್ಷವೇ 198 ಕ್ಷೇತ್ರಗಳಲ್ಲಿ ಜಯಗಳಿಸುವ ಹಂತ ತಲುಪಿದೆ.

ಆದರೆ, ಬಿಜೆಪಿ ನೇತೃತ್ವದ ಎನ್ ಡಿಎಗೆ ದಯನೀಯ ಸೋಲು ಕಂಡಿದೆ. 157 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದೆ. ಅದರಲ್ಲಿ 119 ಕ್ಷೇತ್ರದಲ್ಲಿ ಬಿಜೆಪಿ ಯಶ ಕಾಣು ಸಾಧ್ಯತೆಗಳಿವೆ. ಜವಾಹರ್ ಲಾಲ್ ನೆಹರು ನಂತರ ಸತತ ಎರಡನೇ ಬಾರಿಗೆ ಪ್ರಧಾನಮಂತ್ರಿ ಹುದ್ದೆಯನ್ನು ಮನಮೋಹನ್ ಸಿಂಗ್ ಅಲಂಕರಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸವೂ ಹೌದು ಎನ್ನಲಾಗಿದೆ.

ರಾಜಸ್ಥಾನ, ದೆಹಲಿ, ಹರಿಯಾಣಾ, ಮದ್ಯಪ್ರದೇಶ, ಪಂಜಾಬ, ಉತ್ತರ ಖಂಡ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀಕಿ ಜಯಗಳಿಸಿರುವುದು ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಎನ್ ಡಿಎಗೆ ಕರ್ನಾಟಕ, ಮಧ್ಯಪ್ರದೇಶ ಮತ್ತು ಗುಜರಾತನಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದೆ. ಬಿಜೆಪಿಯ ಮನೇಕಾ ಗಾಂಧಿ ಅನ್ಲಾ ಲೋಕಸಭೆ ಕ್ಷೇತ್ರದಲ್ಲಿ ಹಿನ್ನೆಡೆ ಕಂಡಿದ್ದಾರೆ.

(ಏಜನ್ಸೀಸ್)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X