ಐಓಸಿಗೆ ವಿಜಯ ಮಲ್ಯ ನೀಡಿದ್ದ ಚೆಕ್ ಬೌನ್ಸ್
ನವದೆಹಲಿ, ಮೇ.6: ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ ಲೈನ್ಸ್, ಸರಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ (ಐಓಸಿ) ಸಂಸ್ಥೆಗೆ ನೀಡಿದ್ದ 160 ಕೋಟಿ ರೂಪಾಯಿಯ ಚೆಕ್ ಬೌನ್ಸ್ ಆಗಿದ್ದರಿಂದ, ಕೊನೆಗೆ ಐಓಸಿ ಬ್ಯಾಂಕ್ ಗ್ಯಾರಂಟಿ ಮೂಲಕ 50 ಕೋಟಿ ರೂಪಾಯಿಗಳನ್ನು ನಗದು ಮಾಡಿಕೊಂಡಿದೆ.
ಹತ್ತು ದಿನದ ಹಿಂದೆ ವಿಮಾನ ಇಂಧನ ಪಡೆದಿದ್ದ ಕಿಂಗ್ ಫಿಶರ್, 160 ಕೋಟಿ ರುಪಾಯಿ ಬಾಕಿ ಪಾವತಿಸಬೇಕಿತ್ತು. ಈ ಹಣಕ್ಕೆ ಚೆಕ್ ನೀಡಿದ್ದ ಸಂಸ್ಥೆಯ ಚೆಕ್ ಬೌನ್ಸ್ ಆಗಿದ್ದರಿಂದ ಬ್ಯಾಂಕ್ ಗ್ಯಾರಂಟಿಯ ಮೂಲಕ 50 ಕೋಟಿ ಪಡೆದುಕೊಳ್ಳಬೇಕಾಯಿತು ಎಂದು ಉದ್ಯಮದ ಮೂಲಗಳು ತಿಳಿಸಿವೆ. ಕಿಂಗ್ ಫಿಶರ್ ಸಂಸ್ಥೆ ಎಚ್ ಪಿ ಸಿ ಎಲ್ ಮತ್ತು ಬಿ ಪಿ ಸಿ ಎಲ್ ಗಳಿಗೂ ಕ್ರಮವಾಗಿ 360 ಮತ್ತು 290 ಕೋಟಿ ರುಪಾಯಿ ಪಾವತಿಸಬೇಕಾಗಿದೆ.
ಈ ಹಿಂದೆಯೇ ಸಕಾಲಕ್ಕೆ ಪಾವತಿಸದ ಕಾರಣ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಹಣ ನೀಡಿಯೇ ಇಂಧನ ತುಂಬಿಸಿಕೊಳ್ಳಲು ಸೂಚಿಸಿತ್ತು. ಈಗ ಇತರ ಎರಡು ಸರಕಾರಿ ಸ್ವಾಮ್ಯದ ಸಂಸ್ಥೆಗಳಾದ ಐಓಸಿ ಮತ್ತು ಬಿಪಿಸಿಎಲ್ ಗಳು ಕಿಂಗ್ ಫಿಶರ್ ಗೆ ಸಾಲ ನೀಡುವುದನ್ನೇ ನಿಲ್ಲಿಸಿವೆ. ಎಚ್ ಪಿಸಿಎಲ್ ಮಾತ್ರ ಸಾಲ ರೂಪದಲ್ಲಿ ಸರಬರಾಜು ಮುಂದುವರಿಸಿದೆ.
(ಏಜನ್ಸೀಸ್)












Click it and Unblock the Notifications