ಐಎಎಸ್ : ರಾಜ್ಯಕ್ಕೆ 17ಕ್ಕೂ ಹೆಚ್ಚು ರ‌್ಯಾಂಕ್ ಗಳು
ಬೆಂಗಳೂರು, ಮೇ. 5 : 2008 ಸಾಲಿನ ಯುಪಿಎಸ್ ಸಿ ನಾಗರಿಕ ಸೇವಾ ಹುದ್ದೆಗಳಿಗೆ ನಡೆಸಿದ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ರಾಜ್ಯಕ್ಕೆ 17ಕ್ಕೂ ಹೆಚ್ಚು ರ‌್ಯಾಂಕ್ ಗಳು ಲಭಿಸಿವೆ. ಮಂಡ್ಯದ ಮೂಲದ ಸಿ ಸೌಮ್ಯ ಎಂಬುವವರು 11 ನೇ ರ‌್ಯಾಂಕ್ ಗಳಿಸಿದ್ದಾರೆ.
ಚೆನ್ನೈನಲ್ಲಿ ಭಾರತೀಯ ಕಂದಾಯ ಇಲಾಖೆ ಸೇವೆ (ಐಆರ್ಎಸ್) ಇಲಾಖೆಯಲ್ಲಿ ಕಸ್ಟಮ್ಸ್ ವಿಭಾಗದ ಉಪಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಸಿ ಸೌಮ್ಯ ಅವರು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಐಆರ್ಎಸ್ (ಆದಾಯ ತೆರಿಗೆ) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವಿಜಯ್ ಕಿರಣ್ ಅನಂದ್ ಅವರು 32 ನೇ ಸ್ಥಾನ ಪಡೆದುಕೊಂಡಿದ್ದು, ರಾಜ್ಯಕ್ಕೆ 2ನೇ ಸ್ಥಾನದಲ್ಲಿದ್ದಾರೆ.
ನಾಗರಿಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವವರ ಹೆಸರು ಮತ್ತು ರ‌್ಯಾಂಕ್ ಗಳ ವಿವರ
* ಡಿ ಕೆ ರವಿ - 34
* ಶಿಲ್ಪಾ ಪ್ರಭಾಕರ್ - 46
* ಟಿ ಜಿ ವಿನಯ್ - 50
* ಡಾ ವೆಂಕಟೇಶ್ - 76
* ಶರಣಪ್ಪ - 86
* ಅನುಚಿತ್ - 100
* ಡಾ ಶ್ರೀನಿವಾಸ್ - 149
* ಎನ್ ಹರೀಶ್ - 186
* ಜೆ ಮಹೇಶ್ - 278
* ಚೆನ್ನಪ್ಪ ಶಿವಸಿಂಪಿ -337
* ಪ್ರಸನ್ನ ವಿ ಪಟ್ಟಣಶೆಟ್ಟಿ - 362
* ರೋಹನ್ ಪಿ ಕನ್ಯಾ - 377
* ಪ್ರಿಯದರ್ಶಿನಿ - 378
* ಸುರೇಶ್ ಯತ್ನಾಳ್ - 501
* ಜಿ ನರೇಶ್ - 766
* ಎಂ ಜಿ ಚೇತನ್ - 787
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications