ಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ

ಮೇ 2ರಂದು ಸಂಬಂಧಿಸಿದ ಎಲ್ಲ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರತಿವರ್ಷದಂತೆ ದಟ್ಸ್ ಕನ್ನಡ.ಕಾಂ ಈ ಬಾರಿ ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ತನ್ನ ವೆಬ್ ತಾಣದಲ್ಲಿ ಪ್ರಕಟಿಸಲಿದೆ. ಈ ಸಾಲಿನಲ್ಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 8.58 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಮೌಲ್ಯಮಾಪನ ಕಾರ್ಯ ಏ.19ಕ್ಕೆ ಅಂತ್ಯವಾಗಿತ್ತು.
ಶುಕ್ರವಾರ (ಮೇ.1) ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಫಲಿತಾಂಶದ ವಿವರಗಳನ್ನು ನೀಡಲಿದ್ದಾರೆ. ಮಧ್ಯಾಹ್ನ 12ರ ನಂತರ 3 ಗಂಟೆಯೊಳಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಇಲಾಖೆಯ ವೆಬ್ ಸೈಟಿನಲ್ಲಿ ಲಭ್ಯವಾಗಲಿದೆ.
(ದಟ್ಸ್ ಕನ್ನಡ ವಾರ್ತೆ)
ಮೈಸೂರಿನಲ್ಲಿ 43,457 ಎಸೆಸ್ಸೆಲ್ಸಿಪರೀಕ್ಷಾರ್ಥಿಗಳು











Click it and Unblock the Notifications