ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸಿಸಲು ಬೆಂಗಳೂರು ಬೆಸ್ಟ್ ಬೆಸ್ಟ್

By Staff
|
Google Oneindia Kannada News

ನ್ಯೂಯಾರ್ಕ್, ಏ. 29 : ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಸಾಫ್ಟವೇರ್ ಸ್ವರ್ಗ, ನಿವೃತ್ತರ ನೆಮ್ಮದಿ ತಾಣ ಹೀಗೆ ಹತ್ತು ಹಲವು ಕಿರೀಟಗಳನ್ನು ಹೊತ್ತುಕೊಂಡಿರುವ ನಮ್ಮ ಬೆಂಗಳೂರು ಸಿಟಿಗೆ ಇದೀಗ ಇನ್ನೊಂದು ಗೌರವ ಸಿಕ್ಕಿದ್ದು, ಭಾರತ ದೇಶದಲ್ಲಿ ವಾಸಿಸಲು ಅತ್ಯುತ್ತಮವಾದ ಸ್ಥಳ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ದಿ ಕ್ವಾಲಿಟಿ ಆಫ್ ಲಿವೀಂಗ್ ರಿಪೋರ್ಟ್ 2009 ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಆಸ್ಟ್ರೀಯಾದ ರಾಜಧಾನಿ ವಿಯನ್ನಾ ಜಗತ್ತಿನಲ್ಲಿಯೇ ವಾಸಿಸಲು ಅತ್ಯುತ್ತಮವಾದ ಸ್ಥಳ ಎಂದು ವರದಿ ಹೇಳಿದೆ. ಜುರಿಚ್, ಜಿನೆವಾ ಹಾಗೂ ವ್ಯಾಂಕೊವರ್ ನಗರಗಳು ಎರಡು, ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿವೆ. ಭಾರತದಲ್ಲಿ ಮೊದಲ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ. ನಂತರದಲ್ಲಿ ದೇಶದ ರಾಜಧಾನಿ ನವದೆಹಲಿ, ಚೆನ್ನೈ ಮಹಾನಗರಗಳು ಪಡೆದುಕೊಂಡಿವೆ. ಇತ್ತೀಚೆಗೆ ಭಯೋತ್ಪಾದಕರ ಕಪಿಮುಷ್ಟಿಯಲ್ಲಿ ನಲುಗಿದ ಮುಂಬೈ ಕೊನೆಯ ಸ್ಥಾನ ಪಡೆದುಕೊಂಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X