ಹಿಜ್ಬುಲ್ ಉಗ್ರ ಬಂಧನ : ಅಪಾರ ಶಸ್ತ್ರಾಸ್ತ್ರ ವಶ
ಶ್ರೀನಗರ, ಏ. 25 : ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹದ್ದೀನ್ ಸಂಘಟನೆ ಸದಸ್ಯನೊಬ್ಬನ್ನು ಕಾಶ್ಮೀರ ಗಡಿ ಪ್ರದೇಶದ ಗುರೆಜ್ ಎಂಬಲ್ಲಿ ಬಂಧಿಸಿರುವ ಭಾರತೀಯ ಸೇನಾಪಡೆ, ಆತನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತಗಳನ್ನು ವಶಪಡಿಸಿಕೊಂಡಿದೆ. 32 ಜನ ತರಬೇತಿ ಪಡೆದಿರುವ ಭಯೋತ್ಪಾದಕರು ಭಾರತದೊಳಗೆ ನುಸುಳಿದ್ದಾರೆ ಎಂದು ಉಗ್ರ ವಿಚಾರಣೆ ವೇಳೆಯಲ್ಲಿ ಬಾಯಿಬಿಟ್ಟಿದ್ದಾನೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೇನಾಪಡೆಯ ಬ್ರಿಗೇಡಿಯರ್ ಗುರ್ಮೀತ್ ಸಿಂಗ್, ಪಾಕ್ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಸಯ್ಯದ್ ಮೊಯಿನ್ ಉಲ್ ಶಾ ಎಂಬುವವನನ್ನು ಬಂಧಿಸಲಾಗಿದೆ. ಬಂಧಿತನಿಂದ 10 ಎಕೆ 47 ರೈಫಲ್ ಗಳು, 13 ಸಾವಿರ ಕಾಡತೂಸುಗಳು, 32 ಕೆಜಿ ಸ್ಫೋಟಕ ಸಾಮಗ್ರಿ, 14 ಆರ್ ಪಿಜಿ ಶೆಲ್ ಗಳು, 445 ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಉಗ್ರ ಪಶ್ಚಿಮ ಪಾಕಿಸ್ತಾನಕ್ಕೆ ಸೇರಿದವನಾಗಿದ್ದು, ಮನಶೇರಾ ಪ್ರದೇಶದಲ್ಲಿ ತರಬೇತಿ ಪಡೆದುಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಒಟ್ಟು ಇದೇ ವರ್ಷದಲ್ಲಿ 52 ಪಾಕ್ ಮೂಲದ ಉಗ್ರನನ್ನು ಬಂಧಿಸಲಾಗಿದೆ. ಸೇನಾಪಡೆ ನಡೆಸಿದ ವಿಚಾರಣೆಯಲ್ಲಿ ತಾಲಿಬಾನ್ ಉಗ್ರರು ತಮ್ಮ ಕಾರ್ಯಚರಣೆ ನಡೆಸಿಲ್ಲ ಎಂಬುದನ್ನು ಉಗ್ರ ಸ್ಪಷ್ಟಪಡಿಸಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications