ಪ್ರಧಾನಿ ಹುದ್ದೆಗೆ ಅನುಭವ ಬೇಕಿಲ್ಲ : ರಾಹುಲ್

ಕೊಲ್ಕತ್ತಾದಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಸುಮಾರು ಒಂದೂವರೆ ಗಂಟೆಗೊ ಹೆಚ್ಚು ಕಾಲ ಪತ್ರಕರ್ತರೊಂದಿಗೆ ಅವರು ಮಾತನಾಡಿದ್ದರು. ಮುಂದಿನ ದಿನಗಳಲ್ಲಿ ಪ್ರಧಾನಿ ಹುದ್ದೆ ಅಲಂಕರಿಸುವುದನ್ನು ಸ್ಪಷ್ಟವಾಗಿ ತಳ್ಳಿಹಾಕದ ಅವರು, ಸದ್ಯಕ್ಕಂತೂ ಆ ಬಗ್ಗೆ ನಾನು ಚಿಂತನೆ ನಡೆಸಿಲ್ಲ ಎಂದಷ್ಟೇ ಉತ್ತರಿಸಿದರು. ಪ್ರಧಾನಿ ಹುದ್ದೆ ಅಲಂಕರಿಸಲು ಅನುಭವಬೇಕು ಎಂದು ನನಗೆ ಅನಿಸುತ್ತಿಲ್ಲ. ದೇಶವನ್ನು ಮುನ್ನೆಡೆಸುವ ಸಾಮರ್ಥ್ಯವಿದ್ದರೆ ಸಾಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ನಾನು ಬಡವರ ಪರವಾಗಿ ಕೆಲಸ ಮಾಡಲು ಬಯಸುವೆ. ಬಡವರ ಏಳ್ಗೆಗಾಗಿ ಏನಾದರು ಮಾಡಬೇಕು. ಬಡತನದಿಂದ ಆ ಜನರನ್ನು ಮುಕ್ತರನ್ನಾಗಿಸಬೇಕು ಎಂಬ ಕನಸಿದೆ. ಆ ನಿಟ್ಟಿನಲ್ಲಿ ಮಾತ್ರ ನಾನು ಇದೀಗ ತಲೆಕೆಡಿಸಿಕೊಂಡಿರುವೆ ಎಂದು ರಾಹುಲ್ ಗಾಂಧಿ ಹೇಳಿದರು.
(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications