ರಿಲೈಯನ್ಸ್ 4ನೇ ತ್ರೈಮಾಸಿಕ ಇಳಿಕೆ
ಮುಂಬೈ, ಏ. 23 : ಮುಖೇಶ್ ಅಂಬಾನಿ ಒಡೆತನ ರಿಲೈಯೆನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಸಮೂಹವು ತನ್ನ ನಾಲ್ಕನೇ ತ್ರೈಮಾಸಿಕದಲ್ಲಿ ಮತ್ತೆ ಇಳಿಕೆ ಕಂಡಿದೆ. ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಮೂರನೇ ತ್ರೈಮಾಸಿಕದಲ್ಲಿ ನಷ್ಟ ಉಂಟಾಗಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಅದೇ ಸ್ಥಿತಿ ಮುಂದುವರಿದಿದ್ದು, ಒಟ್ಟು ಆದಾಯದಲ್ಲಿ ಶೇ. 9 ರಷ್ಟು ಇಳಿಕೆ ಕಂಡಿದೆ.
ದೇಶದಲ್ಲಿ ಅತೀ ದೊಡ್ಡ ಪೆಟ್ರೋಕೆಮಿಕಲ್ಸ್ ಕಂಪನಿಯಾಗಿರುವ ಆರ್ಐಎಲ್ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಶೇ. 9 ರಷ್ಟು ಅಂದರೆ 3,546 ಕೋಟಿ ರುಪಾಯಿಗಳ ನಷ್ಟ ಅನುಭವಿಸಿದೆ. ಮಾರಾಟದಲ್ಲಿ ಕೂಡಾ ಶೇ. 24 ರಷ್ಟು ಅಂದರೆ 28,362 ಕೋಟಿ ರುಪಾಯಿಗಳಷ್ಟು ವ್ಯವಹಾರ ಕಡಿಮೆಯಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಆರ್ಥಿಕ ಹಿಂಜರಿತದಿಂದ ವ್ಯವಹಾರದ ಭಾರಿ ಪ್ರಭಾವ ಬೀರಿದ್ದು, ಒಂದೇ ಸ್ಥಳದಲ್ಲಿರುವ ವಿಶ್ವ ಅತೀ ದೊಡ್ಡ ರಿಪೈನರಿ ಕಂಪನಿ ಎಂಬ ಹೆಗ್ಗಳಿಕೆ ಪಡೆದಿರುವ ಆರ್ಐಎಲ್ ಕಂಪನಿ ಕಳೆದ ಮೂರು ನಂತರ ಮೊದಲ ಸಲ ನಷ್ಟ ಅನುಭವಿಸಿದೆ. ಆದರೆ, ಇದೇ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆದಾಯ ಇಳಿಕೆ ಆಗಿತ್ತು, ಆದರೆ ನಷ್ಟ ಉಂಟಾಗಿರಲಿಲ್ಲ ಎಂದು ಕಂಪನಿ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications