ಕೊಡಗಿನ ಲೇಖಕಿಯ ಕೃತಿಗೆ ಭಾರಿ ಸಂಭಾವನೆ
ನವದೆಹಲಿ, ಏ. 22 : ಅಮೆರಿಕದಲ್ಲಿ ನೆಲೆಸಿರುವ ಕೊಡಗು ಮೂಲದ ಸರಿತಾ ಮಂದಣ್ಣ ತಮ್ಮ ಚೊಚ್ಚಲವ ಕಾದಂಬರಿ ಟೈಗರ್ ಹಿಲ್ಸ್ ಗೆ ಪೆಂಗ್ವಿನ್ ಪ್ರಕಾಶನ ಸಂಸ್ಥೆಯಿಂದ ದಾಖಲೆ ಹಣ ಪಡೆದು ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ.
ಬ್ರಿಟನ್ನಿನ ಡೆವಿಡ್ ಗಾಡ್ವಿನ್ ಅಸೋಸಿಯೇಟ್ಸ್ ಟೈಗರ್ ಹಿಲ್ಸ್ ಅನ್ನು ಪೆಂಗ್ವಿನ್ ಬುಕ್ ಇಂಡಿಯಾ ಸಂಸ್ಥೆಗೆ ಭಾರಿ ಮೊತ್ತಕ್ಕೆ ಮಾಡಿದ ಗಾಡ್ವಿನ್ ಸಂಸ್ಥೆ ವಕ್ತಾರೆ ಸೋಫಿ ಹೌಲ್ಟ್ ಮಾತ್ರ ಏಳು ಅಂಕಿಗಳ ಮೊತ್ತ ಎಂದು ಗುಟ್ಟುಬಿಟ್ಟುಕೊಟ್ಟಿದ್ದಾರೆ. ಟೈಗರ್ ಹಿಲ್ಸ್ ಕಾದಂಬರಿ 1878 ರಿಂದ ದ್ವಿತೀಯ ಮಹಾಯುದ್ಧದವರಿಗೆ ಭಾರತದಲ್ಲಿ ನಡೆದಿರುವ ಘಟನಾವಳಿಯನ್ನು ಆಧರಿಸಿದೆ. ಸರಿತಾ ಸದ್ಯ ಈಕ್ವಿ-ಫಿನ್ ಹಣಕಾಸು ಸಂಸ್ಥೆಯ ಉಪಾಧ್ಯಕ್ಷೆಯಾಗಿದ್ದಾರೆ.
(ಏಜನ್ಸೀಸ್)












Click it and Unblock the Notifications