ಛಾಪಾಕೂಪ : ಸಂಗ್ರಾಮ್ ಸೇರಿ 9 ಜನ ತಪ್ಪಿತಸ್ಥರು

ಈ ಪ್ರಕರಣದಲ್ಲಿ ಒಟ್ಟು ಅಬ್ದುಲ್ ಕರೀಂ ತೆಲಗಿ ಸೇರಿದಂತೆ 12 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಇವರಲ್ಲಿ ಡಾ. ರೇಹನ್ ಬೇಗ್, ರೋಶನ್ ಬೇಗ್ ಮತ್ತು ವಿಎ ಖಾನ್ ರನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಬಿಡುಗಡೆ ಮಾಡಲಾಗಿದೆ.
ಆದರೆ, ಸಂಗ್ರಾಮ್ ಸಿಂಗ್ ವಿರುದ್ಧ ಆರೋಪ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ. ಸಂಗ್ರಾಮ್ ಸಿಂಗ್ ವಿರುದ್ಧ ತಪ್ಪು ಮಾಹಿತಿ ನೀಡಿದ ಮತ್ತು ಸಾಕ್ಷಿ ತಿರುಚಿದ ಆರೋಪಗಳನ್ನು ಹೊರಸಲಾಗಿತ್ತು. ಖುಲಾಸೆಯಾದ ಆರೋಪಿಗಳ ವಿರುದ್ಧವೂ ಇದೇ ಆರೋಪಗಳನ್ನು ಹೊರೆಸಲಾಗಿತ್ತು. ಆದರೆ, ಅವರ ವಿರುದ್ಧ ಸಾಕ್ಷಿ ದೊರಕದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications