ಸಿಕ್ಕಿಂ ಮಹಿಳೆಯ ಮತಚೀಟಿಯಲ್ಲಿ ಬಚ್ಚನ್ ಚಿತ್ರ!

ಈ ಘಟನೆ ನಡೆದಿದ್ದು ಪೂರ್ವ ಸಿಕ್ಕಿಂ ನ ನಾಮಚೆಬುಂಗ ಎನ್ನುವ ಕ್ಷೇತ್ರದಲ್ಲಿ. ಕ್ಷೇತ್ರಕ್ಕೆ ಸಂಬಂಧಪಟ್ಟ ಚುನಾವಣಾ ಕಚೇರಿ ಈಕೆಗೆ ಗುರುತಿನ ಚೀಟಿ(EPIC) ಸಂಖ್ಯೆ CDC0078857 ವಿತರಿಸಿತ್ತು. ಇದರಲ್ಲಿ ಆಗಿರುವ ತಪ್ಪಿನ ಬಗ್ಗೆ ಕೂಡಲೇ ಈಕೆ ಚುನಾವಣಾಧಿಕಾರಿಗಳಿಗೆ ಸಂಪರ್ಕಿಸಿ ದೂರು ನೀಡಿದರು. ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಗುರುತಿನ ಚೀಟಿಯನ್ನು ಸರಿಪಡಿಸುವ ಭರವಸೆ ನೀಡಿದರು. ಮಹಿಳೆಯ ಫೋಟೋ ಇರುವ ಜಾಗದಲ್ಲಿ ಅಮಿತಾಬ್ ಬಚ್ಚನ್ ಭಾವಚಿತ್ರ ಹೇಗೆ ಬಂತು ಅನ್ನುವುದು ಅವರಿಗೆ ತಿಳಿಯುತ್ತಿಲ್ಲವಂತೆ !! ವಿಷಯ ಅಮಿತಾಬ್ ಗೆ ತಿಳಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಆಲೋಚನೆಯಲ್ಲಿ ಡಂಕಾ ಮುಳುಗಿದ್ದಾಳೆ ಎನ್ನುತ್ತಾರೆ ಗ್ರಾಮಸ್ಥರು.
(ಏಜೆನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications