ಎಲ್ಲ ಎಟಿಎಂಗಳಲ್ಲಿ ಹಣ ತೆಗೆಯವ ವ್ಯವಸ್ಥೆ ಜಾರಿ
ನವದೆಹಲಿ, ಏ. 1 : ಎಟಿಎಂ ಬಳಕೆದಾರರಿಗೆ ಸಹಿ ಸುದ್ದಿಯೊಂದು ರಿಸರ್ವ್ ಬ್ಯಾಂಕ್ ನಿಂದ ಹೊರಬಿದ್ದಿದೆ. ನಿರ್ಧಿಷ್ಟವಾದ ಎಟಿಎಂಗಳನ್ನು ಹುಡುಕಿಕೊಂಡು ತಿರುಗಾಡುವ ಪರಿಸ್ಥಿತಿಯನ್ನು ತಪ್ಪಿಸಿರುವ ರಿಸರ್ವ್ ಬ್ಯಾಂಕ್ ಯಾವ ಬ್ಯಾಂಕ್ ನಿಂದಲಾದರೂ ಸೇವೆ ತೆರಿಗೆ ಇಲ್ಲದೆಯೇ ಹಣವನ್ನು ತೆಗೆದುಕೊಳ್ಳುವ ವಿನೂತನ ವ್ಯವಸ್ಥೆಯನ್ನು ಇಂದಿನಿಂದ ಆರಂಭಿಸಿದೆ.
ಜನಸಾಮಾನ್ಯರ ಪರದಾಟವನ್ನು ನೋಡಲಾರದೆ ರಿಸರ್ವ್ ಬ್ಯಾಂಕ್ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಈ ನೂತನ ವ್ಯವಸ್ಥೆ ಭಾರತಕ್ಕೆ ಮಾತ್ರ ಸಿಮೀತವಾಗಿದ್ದು, ಭಾರತದ ಹೊರಗಡೆ ಇರುವ ಬೇರೆ ಬೇರೆ ಎಟಿಎಂಗಳಲ್ಲಿ ಬೇರೆ ಬೇರೆ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಗಳಿಂದ ಹಣ ತೆಗೆದುಕೊಂಡರೆ ಸೇವೆ ತೆರಿಗೆಯನ್ನು ವಿಧಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)
ಏ.1ರಿಂದಯಾವುದೇ ಎಟಿಎಂನಿಂದ ಹಣ ಪಡೆಯಿರಿ











Click it and Unblock the Notifications