ನವರಂಗ್ ಬಳಿ ಸಿಕ್ಕ ಬಾಂಬ್ ನಿಷ್ಕ್ರಿಯ : ಪೊಲೀಸ್
ಬೆಂಗಳೂರು, ಮಾ. 31: ರಾಜಾಜಿನಗರದಡಾ. ರಾಜ್ ಕುಮಾರ್ ರಸ್ತೆಯ ನವರಂಗ್ ಚಿತ್ರಮಂದಿರದ ಸಮೀಪ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಇದರಿಂದ ಇಂದು ಸುತ್ತಮುತ್ತಲ ಪ್ರದೇಶದಲ್ಲಿ ಬೆಳಗ್ಗೆ ಕೆಲಕಾಲ ಸಂಚಾರ ದಟ್ಟಣೆ ಅಸ್ತವ್ಯಸ್ತವಾಗಿತ್ತು. ನಾಡಬಾಂಬು ಮಾದರಿಯಲ್ಲಿದ್ದ ಸ್ಫೋಟಕವಸ್ತುಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು ಜನರು ಆತಂಕಪಡುವ ಕಾರಣವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಣ್ಣ ಬಣ್ಣದ ಪಟಾಕಿಗಳನ್ನು ಮಾಡಲು ಬಳಸುವ ಸಾಮಾನ್ಯ ಸ್ಫೋಟಕವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಬಾಂಬ್ ಇದಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕರು ನಿತ್ಯ ಓಡಾಡುವ ಸ್ಥಳದಲ್ಲಿ ಬಾಂಬ್ ಸಿಕ್ಕಿರುವುದು ಆತಂಕಕ್ಕೆ ಈಡು ಮಾಡಿದೆ. ಜನ ಸಾಮಾನ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಪೊಲೀಸರ ಮೇಲೆ ಹರಿ ಹಾಯ್ದರು .ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications